Webdunia - Bharat's app for daily news and videos

Install App

ಲೈಂಗಿಕ ಸುಖಕ್ಕಾಗಿ ಪದೇ ಪದೇ ಪೀಡಿಸುತ್ತಿದ್ದ ಪತಿಗೆ ಪತ್ನಿ ಮಾಡಿದ್ದೇನು ಗೊತ್ತಾ?

Webdunia
ಮಂಗಳವಾರ, 12 ಡಿಸೆಂಬರ್ 2023 (08:56 IST)
ಲೈಂಗಿಕ ಸುಖಕ್ಕಾಗಿ ಪದೇ ಪದೇ ಪೀಡಿಸುತ್ತಿದ್ದ ಪತಿಯ ವರ್ತನೆಯಿಂದ ಬೇಸರಗೊಂಡ ಪತ್ನಿಯೊಬ್ಬಳು ಪತಿಯ ಚಹಾದಲ್ಲಿ ಕೀಟನಾಶಕ ಬೆರೆಸಿ ಹತ್ಯೆಗೆ ಪ್ರಯತ್ನಿಸಿದ ವಿಚಿತ್ರ ಘಟನೆ ವರದಿಯಾಗಿದೆ.
 
ಪೊಲೀಸ್ ಮೂಲಗಳ ಪ್ರಕಾರ, ಪದೇ ಪದೇ ಲೈಂಗಿಕ ಸುಖಕ್ಕಾಗಿ ಪೀಡಿಸುತ್ತಿರುವದರಿಂದ ಬೇಸತ್ತು ಅನಿಲ್ ಕಚೇರಿಗೆ ತೆಗೆದುಕೊಂಡು ಹೋಗುವ ಟಿಫಿನ್‌ ಬಾಕ್ಸ್‌ನಲ್ಲಿ ಕೀಟನಾಶಕ ಬೆರೆಸಿದ್ದಳು. ಆದರೆ,ಹೊಟ್ಟೆನೋವಿನಿಂದಾಗಿ ಆತ ಟಿಫಿನ್‌ ಬಾಕ್ಸ್‌ನಲ್ಲಿರುವ ಆಹಾರವನ್ನು ರಸ್ತೆಯಲ್ಲಿ ಬಿಸಾಕಿ ಹೋಗಿದ್ದ. ಸಾಯಂಕಾಲ ಮನೆಗೆ ಬಂದೊಡನೆ ಟೀ ಕೊಡುವಂತೆ ಕೇಳಿದ ಪತಿಗೆ ಮತ್ತೆ ಚಹಾದಲ್ಲಿ ಕೀಟನಾಶಕ ಬೆರಸಿ ನೀಡಿದ್ದಾಳೆ.
 
ಚಹಾ ಕುಡಿದ ನಂತರ ಅನಿಲ್ ಆರೋಗ್ಯದಲ್ಲಿ ಏರುಪೇರಾಗಿ ಹತ್ತಿರದಲ್ಲಿರುವ ಸಂಜೀವಿನಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅರೋಗ್ಯ ಮತ್ತಷ್ಟು ಹದಗೆಟ್ಟಿದ್ದರಿಂದ ತುರ್ತುನಿಗಾಘಟಕದಲ್ಲಿ ಚಿಕಿತ್ಸೆ ನೀಡಲಾಗಿದೆ ಎನ್ನಲಾಗಿದೆ.
 
ಪತ್ನಿಯ ಕೃತ್ಯದಿಂದಾಗಿ ಪತಿಯ ದೇಹಸ್ಥಿತಿ ವಿಷಮ ಸ್ಥಿತಿಯಲ್ಲಿದ್ದು, ತುರ್ತುನಿಗಾ ಘಟಕದಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾನೆ, ವಿರಾರ್ ಪೊಲೀಸ್ ಠಾಣೆಯ ಪೊಲೀಸರು ಹತ್ಯೆಗೈಯಲು ಪ್ರಯತ್ನಿಸಿದ ಆತನ ಪತ್ನಿಯನ್ನು ಬಂಧಿಸಿದ್ದಾರೆ.
 
ಮುಂಬೈ ನಿವಾಸಿಯಾಗಿರುವ ಪತಿ ಖಾಸಗಿ ಕಂಪೆನಿಯಲ್ಲಿ ಎಲೆಕ್ಟ್ರಿಸಿಯನ್ ವೃತ್ತಿಯಲ್ಲಿದ್ದ. ಕಳೆದ ಮೂರು ತಿಂಗಳ ಹಿಂದೆ 21 ವರ್ಷ ವಯಸ್ಸಿನ ಆಶಾ ಎನ್ನುವ ಯುವತಿಯನ್ನು ವಿವಾಹವಾಗಿದ್ದ.
 
ಮನೆಯಲ್ಲಿರುವ ಕುಟುಂಬದ ಸದಸ್ಯರು ಆಶಾ ಬಳಿ ಕೀಟನಾಶಕ ಪತ್ತೆಯಾಗಿದ್ದರಿಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆಶಾಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
 
ಪೊಲೀಸ್ ಅಧಿಕಾರಿ ಮಾತನಾಡಿ, ಪತಿಯ ಸೆಕ್ಸ್ ದಾಹದಿಂದ ಬೇಸತ್ತು ಇಂತಹ ಕೃತ್ಯ ಎಸಗಿದ್ದಾಗಿ ಆಕೆ ತಪ್ಪೊಪ್ಪಿಕೊಂಡಿದ್ದಾಳೆ ಎಂದು ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಂವಿಧಾನವನ್ನು ಉಳಿಸಲು ಬಿಹಾರದಲ್ಲಿ ನಮ್ಮೊಂದಿಗೆ ಸೇರಿ: ರಾಹುಲ್ ಗಾಂಧಿ ಮನವಿ

ಧರ್ಮಸ್ಥಳ, ಅನಾಮಿಕ ಬಿಜೆಪಿಯ ಸೃಷ್ಟಿ: ಈಶ್ವರ್ ಖಂಡ್ರೆ ಹೊಸ ಬಾಂಬ್‌

ಪಕ್ಷದ ಶಿಸ್ತು ಉಲ್ಲಂಘನೆ: ಶಾಸಕಗೆ ಶಿವಗಂಗಾಗೆ ಬಿಸಿ ಮುಟ್ಟಿಸಿದ ಡಿಕೆ ಶಿವಕುಮಾರ್‌

ಆನ್‌ಲೈನ್‌ನಲ್ಲಿ ಹಾಲು ಆರ್ಡರ್ ಮಾಡಲು ಹೋಗಿ ಲಕ್ಷ ಲಕ್ಷ ಕಳೆದುಕೊಂಡ ವೃದ್ಧೆ

ಹಿಮಾಚಲ ಪ್ರದೇಶದಲ್ಲಿ ರಣಮಳೆಗೆ 124ಕ್ಕೂ ಅಧಿಕ ಸಾವು

ಮುಂದಿನ ಸುದ್ದಿ