Webdunia - Bharat's app for daily news and videos

Install App

ರೂಪದರ್ಶಿಯನ್ನು ಕಾಲ್‌ಗರ್ಲ್‌ ಎಂದು ತಪ್ಪಾಗಿ ತಿಳಿದ ಆರೋಪಿಗಳಿಗೆ ಏನಾಯಿತು ಗೊತ್ತಾ?

Webdunia
ಗುರುವಾರ, 23 ನವೆಂಬರ್ 2023 (12:24 IST)
ನಾರ್ಥ್ ಇಂಡಿಯಾ ಟೀನ್ ಕ್ವೀನ್ ಪ್ರಶಸ್ತಿ ಗೆದ್ದಿರುವ ಮಾಡೆಲ್ (ರೂಪದರ್ಶಿ) ಬಾಂದ್ರಾದ ಬಂದ್‌ಸ್ಟಾಂಡ್‌ ಬಳಿ ರಾತ್ರಿ 10.30 ಗಂಟೆಗೆ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಿರುವಾಗ ಈ ಘಟನೆ ನಡೆದಿದೆ.

ರೂಪದರ್ಶಿಯೊಬ್ಬಳನ್ನು ಕಾಲ್‌ಗರ್ಲ್ ಎಂದು ತಿಳಿದು ಒಂದು ರಾತ್ರಿಗೆ ನಿನ್ನ ರೇಟ್ ಎಷ್ಟು ಎಂದು ಕೇಳಿದ ಹರಿಯಾಣಾ ಮೂಲದ ಇಬ್ಬರು ಬಾಕ್ಸರ್‌ಗಳು ಕೃಷ್ಣನ ಜನ್ಮಸ್ಥಾನವನ್ನು ಸೇರಿದ್ದಾರೆ.
 
ಇಬ್ಬರು ಆರೋಪಿಗಳಾದ ದಿನೇಶ್ ಯಾದವ್ ಮತ್ತು ಅಮಿತ್ ಯಾದವ್ ರೂಪದರ್ಶಿಯನ್ನು ಕಾಲ್‌ಗರ್ಲ್‌ ಎಂದು ತಿಳಿದು ವರ್ತಿಸಿದಾಗ ಕೋಪಗೊಂಡ ರೂಪದರ್ಶಿ, ಜೋರಾಗಿ ಕೂಗಿ ಜನರನ್ನು ಸೇರಿಸಿದ್ದಾಳೆ. ಜನ ಸೇರುತ್ತಿರುವುದು ಕಂಡು ಆರೋಪಿಗಳು ಅಟೋದಲ್ಲಿ ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಆದರೆ, ಅಟೋವನ್ನು ಬೆನ್ನಟ್ಟಿದ ರೂಪದರ್ಶಿ ಒಬ್ಬ ಆರೋಪಿಯನ್ನು ಹಿಡಿದು ಪೊಲೀಸ್ ವಶಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾನು ಜಾಗಿಂಗ್ ಮಾಡಿ ಹೊರಬಂದ ನಂತರ ಇಬ್ಬರು ಆರೋಪಿಗಳು ಹತ್ತಿರ ಬಂದು ಒಂದು ರಾತ್ರಿಗೆ ನಿನ್ನ ರೇಟ್ ಎಷ್ಟು ಎಂದು ಕೇಳಿದ್ದಾರೆ. ಆರೋಪಿಗಳ ವರ್ತನೆಯಿಂದ ಆಕ್ರೋಶಗೊಂಡ ರೂಪದರ್ಶಿ ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಸಿದ್ದಾಳೆ. ಆದರೆ, ನೀನು ಪೊಲೀಸರಿಗೆ ಬೇಕಾದರೆ ದೂರು ಕೊಡು ನಾವು ಹೆದರುವುದಿಲ್ಲ ಎಂದು ಗದರಿದ್ದಾರೆ.
 
ಜನರು ಸೇರುತ್ತಿರುವುದು ಕಂಡು ಗಾಬರಿಯಾದ ಇಬ್ಬರು ಆರೋಪಿಗಳು ಅಟೋ ಹತ್ತಿ ಪರಾರಿಯಾಗುವ ಪ್ರಯತ್ನ ಮಾಡಿದ್ದಾರೆ. ಆದರೆ, ನಾನು ಧೈರ್ಯ ತಂದುಕೊಂಡು ಅಟೋವನ್ನು ಬೆನ್ನಟ್ಟಿ ನಾಕಾಬಂದಿಯಲ್ಲಿದ್ದ ಪೊಲೀಸರಿಗೆ ಇಬ್ಬರು ಆರೋಪಿಗಳ ಬಗ್ಗೆ ಮಾಹಿತಿ ನೀಡಿದ ನಂತರ ಪೊಲೀಸ್ ಅಧಿಕಾರಿ  ತಮ್ಮ ಪೊಲೀಸ್ ಪಡೆಯೊಂದಿಗೆ ಬೆನ್ನಟ್ಟಿ ಇಬ್ಬರು ಆರೋಪಿಗಳನ್ನು ಬಂಧಿಸಿದರು ಎಂದು ಮಾಡೆಲ್ ತಿಳಿಸಿದ್ದಾಳೆ.
 
ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೈಸೂರಿಗೆ ಬೀಗರೂಟಕ್ಕೆ ಬರಕ್ಕಾಗುತ್ತೆ, ಸಿಗಂದೂರಿಗೆ ಬರಕ್ಕಾಗಲ್ವಾ: ಸಿಎಂಗೆ ಪ್ರತಾಪ್ ಸಿಂಹ ಗುದ್ದು

ನಿಮಿಷಾ ಪ್ರಿಯಾಗೆ ಕ್ಷಮೆಯೇ ಇಲ್ಲ, ಪರಿಹಾರ ಹಣವೂ ಬೇಡ ಎಂದ ಯೆಮನ್ ಕುಟುಂಬ

Arecanut price: ಅಡಿಕೆ, ಕಾಳುಮೆಣಸು ಇಂದಿನ ಮಾರುಕಟ್ಟೆ ದರ ಹೇಗಿದೆ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

40 ವರ್ಷ ಮೇಲ್ಪಟ್ಟವರು ಹೃದಯಾಘಾತವಾಗದಂತೆ ಈ ಟಿಪ್ಸ್ ಪಾಲಿಸಿ: ಡಾ ದೇವಿಪ್ರಸಾದ್ ಶೆಟ್ಟಿ

ಮುಂದಿನ ಸುದ್ದಿ
Show comments