ಮಹಿಳೆಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಲು ಹೋದ ಪಾಪಿಗೆ ಆದ ಗತಿಯೇನು ಗೊತ್ತಾ?

Webdunia
ಗುರುವಾರ, 7 ಮಾರ್ಚ್ 2019 (06:54 IST)
ಕೋಲ್ಕತ್ತಾ: ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ 35 ವರ್ಷದ ವ್ಯಕ್ತಿಯೊಬ್ಬ ಬಳಿಕ ಆಕೆಯನ್ನು ಬೆಂಕಿ ಹಚ್ಚಿ ಕೊಲೆ ಮಾಡಲು ಹೋಗಿ ತಾನೇ ಆ ಬೆಂಕಿಯಲ್ಲಿ ಬೆಂದು ಸಾವನಪ್ಪಿದ ಘಟನೆ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ನಡೆದಿದೆ.


ಸಂತ್ರಸ್ತ ಮಹಿಳೆ ವಿಧವೆಯಾಗಿದ್ದು, ತನ್ನಿಬ್ಬರು ಮಕ್ಕಳ ಜೊತೆ ಮಾಲ್ಡಾದ ಸುಭಾಶ್ ನಗರದಲ್ಲಿ ವಾಸಿಸುತ್ತಿದ್ದರು. ಕೆಲದಿನಗಳಿಂದ ಆರೋಪಿ ಮಹಿಳೆಗೆ ತೊಂದರೆ ನೀಡುತ್ತಿದ್ದನು. ಆದ್ರೆ ಸೋಮವಾರ ರಾತ್ರಿ ವೇಳೆ ಆರೋಪಿ ಏಕಾಏಕಿ ಮಹಿಳೆಯ ಮನೆಗೆ ನುಗ್ಗಿ ಆಕೆಯ ಮೇಲೆ ಅತ್ಯಾಚಾರವೆಸೆಗಿದ್ದಾನೆ. ಬಳಿಕ ಆಕೆಯನ್ನು ಕೊಲ್ಲಲು ಬೆಂಕಿ ಹಚ್ಚಿದ್ದಾನೆ. ಆದರೆ ಆಕಸ್ಮಿಕವಾಗಿ ಬೆಂಕಿ  ಆತನಿಗೂ ತಗುಲಿದೆ.


ಮಹಿಳೆಯ ಮನೆಯಿಂದ ಹೊಗೆಬರುತ್ತಿರುವುದನ್ನು ಕಂಡು ಸ್ಥಳಕ್ಕೆ ಸ್ಥಳೀಯರು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆಯಲ್ಲಿ ಮಹಿಳೆ ಮುಖ ಹಾಗೂ ಕೈಗಳಿಗೆ ತೀವ್ರವಾಗಿ ಸುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಆರೋಪಿ ದೇಹವು ಸಂಪೂರ್ಣ ಸುಟ್ಟುಹೋಗಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿದ್ದಾನೆ. ಸದ್ಯ ಘಟನೆ ಕುರಿತು ಪೊಲೀಸರು ಸಂತ್ರಸ್ತೆಯ ಹೇಳಿಕೆಯನ್ನು ಪಡೆದಿದ್ದು, ದೂರನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತಿರುಪತಿ, ಶಿರಡಿಗೆ ಸಂಪರ್ಕಿಸುವ ಎಕ್ಸ್‌ಪ್ರೆಸ್‌ಗೆ ಹಸಿರು ನಿಶಾನೆ, ಪ್ರಯಾಣಿಕರಿಗೆ ಗುಡ್‌ನ್ಯೂಸ್

ಸಾಲ ವಜಾ ಮಾಡಿದ್ದರಲ್ಲಿ ಮೋದಿಗೆ ಎಷ್ಟು ಪಾಲು ಹೋಗಿದೆ: ಸಿದ್ದರಾಮಯ್ಯ ವ್ಯಂಗ್ಯ

ಋತುಚಕ್ರ ರಜೆ ತೀರ್ಪಿಗೆ ಕೆಲವೇ ಕ್ಷಣಗಳಲ್ಲಿ ಬದಲಾವಣೆ ಮಾಡಿದ ಹೈಕೋರ್ಟ್

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಿಎಂ ಕುರ್ಚಿ ಗುದ್ದಾಟದಲ್ಲಿ ರೈತರು ಸಂಕಷ್ಟದಲ್ಲಿ: ಬಿವೈ ವಿಜಯೇಂದ್ರ

ವಿಧಾನಸಭೆ ಒಳಗೆಯೂ ಕಾಂಗ್ರೆಸ್ ಹೋರಾಟ: ಆರ್.ಅಶೋಕ್

ಮುಂದಿನ ಸುದ್ದಿ
Show comments