ನವದೆಹಲಿ : ಅಗ್ನಿಪಥ್ ಯೋಜನೆಯ ವಿರುದ್ಧ ಪ್ರತಿಭಟನೆ ಮಾಡುತ್ತಿರುವುದು ಅರ್ಥಹೀನ ರಾಜಕೀಯವಾಗಿದೆ.
ಇದರ ಬದಲು ಪ್ರತಿಭಟನಾಕಾರರು ಯೋಗ ಮಾಡಬೇಕು ಎಂದು ಯೋಗ ಗುರು ಬಾಬಾ ರಾಮ್ದೇವ್ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಗ್ನಿಪಥ್ ಪ್ರತಿಭಟನಕಾರರು ಯೋಗ ಮಾಡಿದ್ದರೆ, ಅವರು ಬೆಂಕಿ ಹಚ್ಚುವ ಪ್ರಯತ್ನ ಮಾಡುತ್ತಿರಲಿಲ್ಲ. ಪ್ರತಿಭಟನೆಯನ್ನು ಬಿಟ್ಟು ಅವರು ಯೋಗವನ್ನು ಮಾಡಬೇಕಾಗಿತ್ತು ಎಂದ ಅವರು, ರಾಜಕೀಯದಲ್ಲಿ ಯೋಗ ಇರಬೇಕು, ಆದರೆ ಯೋಗದಲ್ಲಿ ರಾಜಕೀಯ ಇರಬಾರದು ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಅಧಿಕಾರದಿಂದ ತೆಗೆದು ಹಾಕಲು ದೇಶದಲ್ಲಿ ಕೆಲವರು ಈ ರೀತಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಯೋಗವು ಸ್ವಯಂ ಶಿಸ್ತು ಮತ್ತು ಸ್ವಯಂ ಪ್ರೇರಣೆಯಾಗಿದೆ.
ಇದು ಸ್ವಯಂ ವಿಶ್ಲೇಷಣೆಯೊಂದಿಗೆ ಹಲವು ಆಯಾಮಗಳನ್ನು ಹೊಂದಿದೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿರುವುದು ಮತ್ತು ನಿಮ್ಮ ಮನಸ್ಸು, ಆಲೋಚನೆಗಳು ಮತ್ತು ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಯೋಗವಾಗಿದೆ ಎಂದರು.