ಕರಾಳ ದಿನ ಆಚರಿಸುವ ಮೂಲಕ ಕನ್ನಡಿಗರಿಗೆ ಇರಿಸುಮುರಿಸು ಮಾಡಲು ಯತ್ನಿಸಿದ್ದ ಎಂಇಎಸ್ ಮತ್ತು ಶಿವಸೇನೆಯ ಪುಂಡುಕೋರರಿಗೆ ಬೆಳಗಾವಿ ಜಿಲ್ಲಾಡಳಿತ ಖಡಕ್ ಉತ್ತರ ನೀಡಿದೆ. ಕರಾಳ ದಿನಾಚರಣಗೆಗೆ ಅನುಮತಿ ನಿರಾಕರಿಸಲಾಗಿದ್ದು, ಇದರಿಂದ ಮರಾಠಿ ಭಾಷಿಕ ಸಂಘಟನೆಗಳಿಗೆ ಮುಖಭಂಗ ಉಂಟಾಗಿದೆ.
ಕರಾಳ ದಿನಾಚರಣೆಗೆ ಬೆಂಬಲ ಸೂಚಿಸಿದ್ದ ಮಹಾರಾಷ್ಟ್ರ ಸಿಎಂ ಸರ್ಕಾರದಿಂದ ತಮ್ಮ ಪ್ರತಿನಿಧಿಯನ್ನೂ ಸಹ ಕಳಿಸುವ ಮಾತನಾಡಿದ್ದರು. ಸರ್ಕಾರದ ನಿರ್ಧಾರಕ್ಕೆ ವಿರೋಧವಾಗಿ ರಾಜ್ಯೋತ್ಸವದ ದಿನದಂದು ಕರಾಳ ದಿನ ಆಚರಿಸಲು ಪುಂಡುಕೋರರು ನಿರ್ಧರಿಸಿದ್ದು, ಅಂದು ಹಲವರಿಗೆ ಲಾಠಿಯೇಟುಗಳೂ ಸಹ ತಗುಲುವ ಸಂಭವವಿದೆ.