ದುರಂತ: ಗ್ಯಾಸ್ ಸಿಲಿಂಡರ್ ಸ್ಫೋಟ!

Webdunia
ಮಂಗಳವಾರ, 23 ನವೆಂಬರ್ 2021 (14:48 IST)
ಅಡುಗೆ ಅನಿಲದ ಸಿಲಿಂಡರ್ ಸ್ಫೋಟವಾಗಿ ಮಹಿಳೆಯೊಬ್ಬರು ಮೃತಪಟ್ಟಿದ್ದು, ಇನ್ನೂ 10 ಮಂದಿ ಗಾಯಗೊಂಡ ಘಟನೆ ಸೇಲಂನ ಕಳಿಂಗಪಟ್ಟಿ ಎಂಬಲ್ಲಿ ನಡೆದಿದೆ.
ಪಾಂಡುರಂಗನ್ ರಸ್ತೆಯಲ್ಲಿರುವ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟವಾಗಿದ್ದು 80 ವರ್ಷದ ರಾಜಲಕ್ಷ್ಮೀ ಎಂಬುವರು ಮೃತಮಹಿಳೆ. ಇವರು ಚಹಾ ಮಾಡಲೆಂದು ಗ್ಯಾಸ್ ಆನ್ ಮಾಡುತ್ತಿದ್ದಂತೆ ಭಾರಿ ಪ್ರಮಾಣದಲ್ಲಿ ಸ್ಫೋಟವುಂಟಾಗಿದೆ. ಸ್ಥಳಕ್ಕೆ ಶೇವಾಪೇಟ್ ಪೊಲೀಸರು ಭೇಟಿ ಕೊಟ್ಟಿದ್ದಾರೆ. ಹಾಗೇ, ಅಗ್ನಿಶಾಮಕದಳದ ಸಿಬ್ಬಂದಿಯೂ ಧಾವಿಸಿದ್ದರು.
ಸಿಲಿಂಡರ್ ಸ್ಫೋಟಗೊಂದ ಮನೆಯಲ್ಲಿದ್ದ ಗೋಪಿ (52) ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸುಮಾರು ಶೇ.90ರಷ್ಟು ಗಾಯಗೊಂಡಿದ್ದು ಬದುಕುವ ಸಾಧ್ಯತೆ ತುಂಬ ಕಡಿಮೆಯಿದೆ ಎಂದು ವೈದ್ಯರು ಹೇಳಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.  ಇನ್ನು ಸುತ್ತಲಿದ್ದ ನಾಲ್ಕು ಮನೆಗಳಿಗೆ ತೀವ್ರ ಹಾನಿಯಾಗಿದ್ದು, ವೆಂಕಟರಾಜನ್, ಇಂದಿರಾಣಿ, ಮೋಹನ್ ರಾಜ್, ನಾಗಸುತ, ಗೋಪಾಲ್, ಧನಲಕ್ಷ್ಮೀ, ಸುದರ್ಶನ್, ಗಣೇಶನ್, ಉಷಾರಾಣಿ, ಲೋಕೇಶ್ ಗಾಯಗೊಂಡವರು.
ಘಟನೆ ಬಗ್ಗೆ ಸೇಲಂ ಜಿಲ್ಲಾ ಅಧಿಕಾರಿ ಎಂ.ವೇಲು ಮಾತನಾಡಿ, ಇಂದು ಮುಂಜಾನೆ 6.30ರ ಹೊತ್ತಿಗೆ ನಮಗೆ ಮಾಹಿತಿ ಸಿಕ್ಕಿದೆ. ಇದರಲ್ಲಿ 10 ಮಂದಿ ಗಾಯಗೊಂಡಿದ್ದಾರೆ. ಎಲ್ಲರನ್ನೂ ಸೇಲಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.  ಇನ್ನು 10ವರ್ಷದ ಬಾಲಕಿಯೊಬ್ಬಳು ಸ್ಫೋಟದಿಂದ ಕುಸಿದ ಮನೆಯ ಅವಶೇಷಗಳಡಿ ಸಿಲುಕಿದ್ದಳು. ಆಕೆಯನ್ನು ರಕ್ಷಿಸಲಾಗಿದೆ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂ ಆಗಲು ಮತ್ತೊಂದು ಹೊಸ ದಾಳ ಉರುಳಿಸಿದ ಡಿಕೆ ಶಿವಕುಮಾರ್

ನಿಮ್ಮ ಸಿಎಂ ಯುದ್ಧಕ್ಕೆ ಬಿಜೆಪಿ ಹೇಗೆ ಕಾರಣವಾಗುತ್ತೆ: ರಣದೀಪ್ ಸುರ್ಜೇವಾಲಗೆ ಆರ್ ಅಶೋಕ್ ಪ್ರಶ್ನೆ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ತೇಜಸ್ ಯುದ್ಧ ವಿಮಾನ ಪತನವಾದಾಗ ನಕ್ಕ ಪಾಕಿಸ್ತಾನಿಯರು: ವಿಡಿಯೋ ವೈರಲ್

ಮುಂದಿನ ಸುದ್ದಿ
Show comments