ಪ್ರಧಾನಿ ಮೋದಿ ಭ್ರಷ್ಟಾಚಾರ ಮಾಡಿದ್ದಾರೆ. ಈ ಕುರಿತ ಮಾಹಿತಿ ನನ್ನಲ್ಲಿದೆ ಎಂದು ರಾಹುಲ್ ಗಾಂಧಿ ಸಿಡಿಸಿರುವ ಬಾಂಬ್ ರಾಷ್ಟ್ರ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ.
ಈ ಕುರಿತು ಬಿಜೆಪಿ ಕಿಡಿಕಾರಿದ್ದು ಧೈರ್ಯವಿದ್ದರೆ ರಾಹುಲ್ ಮಾಹಿತಿ ಬಹಿರಂಗ ಪಡಿಸಲಿ ಎಂದು ಕೇಂದ್ರ ಸಚಿವ ಅನಂತ ಕುಮಾರ್ ಸವಾಲು ಹಾಕಿದ್ದರೆ. ವ್ಯರ್ಥ ಆರೋಪ ಮಾಡುವುದು ಸರಿಯಲ್ಲ. ಈ ಆರೋಪ ಸುಳ್ಳು, ಆಧಾರ ರಹಿತ, ದುರದೃಷ್ಟಕರ. ಹತಾಶೆಯಿಂದ ರಾಹುಲ್ ಈ ಆರೋಪ ಮಾಡಿದ್ದು ದೇಶದ ಕ್ಷಮೆಯಾಚಿಸಬೇಕು ಎಂದು ಸಂಸದೀಯ ವ್ಯವಹಾರಗಳ ಸಚಿವವ ಅನಂತ ಕುಮಾರ್ ಪಟ್ಟು ಹಿಡಿದಿದ್ದಾರೆ.
ನಿಮ್ಮಲ್ಲಿ ಮಾಹಿತಿ ಇದ್ದರೆ ಯಾಕೆ ಹೊರಗೆ ತರ್ತಿಲ್ಲ ಎಂಬ ಸದಾ ಮೋದಿ ಅವರ ಮೇಲೆ ವಾಗ್ದಾಳಿ ನಡೆಸುವುದರಲ್ಲೇ ನಿರತರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪ್ರಶ್ನೆ ಹಾಕಿದ್ದಾರೆ.
ನಿನ್ನೆಯ ಲೋಕಸಭಾ ಕಲಾಪ ಕಿರಣ್ ರಿಜಿಜು ಭ್ರಷ್ಟಾಚಾರ ವಿವಾದಕ್ಕೆ ಆಹುತಿಯಾಗಿತ್ತು. ಇದರ ಬೆನ್ನಲ್ಲೆ ರಾಹುಲ್ ಗಾಂಧಿ ಹೊಸ ಬಾಂಬ್ ಸಿಡಿಸಿರುವುದು ಕುತೂಹಲ ಮೂಡಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.