Publish Date: Sat, 03 Sep 2022 (11:33 IST)
Updated Date: Sat, 03 Sep 2022 (11:35 IST)
ನವದೆಹಲಿ : ಹೋಂ ವರ್ಕ್ ಮಾಡದೇ ಇರುವ ಕಾರಣ ಇಬ್ಬರು ಬಾಲಕಿಯರಿಗೆ ಟ್ಯೂಷನ್ ಟೀಚರ್ ಕ್ರೂರವಾಗಿ ಥಳಿಸಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ.
ನಗರದ ವಾಯುವ್ಯ ಭಾಗದಲ್ಲಿರುವ ಭಲ್ಸ್ವಾ ಡೈರಿಯಲ್ಲಿ ಈ ಘಟನೆ ನಡೆದಿದ್ದು, ಇದೀಗ ಬಾಲಕಿಯರ ತಂದೆ ನೀಡಿರುವ ದೂರಿನ ಆಧಾರದ ಮೇಲೆ ಟ್ಯೂಷನ್ ಟೀಚರ್ ಅನ್ನು ಬಂಧಿಸಲಾಗಿದೆ.
ಆರು ಮತ್ತು ಎಂಟು ವರ್ಷದ ಇಬ್ಬರು ಬಾಲಕಿಯರು ಸಹೋದರಿಯರಾಗಿದ್ದು, ಅಳುತ್ತ ಮನೆಗೆ ಹಿಂದಿರುಗಿದಾಗ ಅವರ ದೇಹದ ಮೇಲೆ ಏಟಿನ ಗುರುತುಗಳಿತ್ತು. ಅಲ್ಲದೇ ಓರ್ವ ಮಗಳು ಪ್ರಜ್ಞೆ ತಪ್ಪಿದಳು. ಇಬ್ಬರನ್ನೂ ರೂಮ್ನಲ್ಲಿ ಕೂಡಿ ಹಾಕಿಕೊಂಡು ಟ್ಯೂಷನ್ ಟೀಚರ್ ಪ್ಲಾಸ್ಟಿಕ್ ಪೈಪ್ನಿಂದ ಥಳಿಸಿದ್ದಾಳೆ ಎಂದು ಅವರ ತಂದೆ ಆರೋಪಿಸಿದ್ದಾರೆ.
ಸಮಿತಿಯು ಆರೋಪಿಗಳ ಬಂಧಿಸುವಂತೆ ಆಗ್ರಹಿಸಿದ್ದು, ಜೊತೆಗೆ ಎಫ್ಐಆರ್ ಪ್ರತಿಯನ್ನು ಸಹ ಕೇಳಿದೆ. ಸೆಪ್ಟೆಂಬರ್ 6ರೊಳಗೆ ಈ ಪ್ರಕರಣದ ಬಗ್ಗೆ ಕ್ರಮ ಕೈಗೊಳ್ಳುವಂತೆ ದೆಹಲಿ ಪೊಲೀಸರಿಗೆ ಮನವಿ ಮಾಡಿದೆ ಎಂದು ತಿಳಿಸಿದ್ದಾರೆ.