Select Your Language

Notifications

webdunia
webdunia
webdunia
webdunia

ಧೋನಿ ವೈಯಕ್ತಿಕ ದಾಖಲೆಗಳು ಬಹಿರಂಗ! ಪತ್ನಿ ಸಾಕ್ಷಿ ದೂರು!

ಧೋನಿ ವೈಯಕ್ತಿಕ ದಾಖಲೆಗಳು ಬಹಿರಂಗ! ಪತ್ನಿ ಸಾಕ್ಷಿ ದೂರು!
Ranchi , ಬುಧವಾರ, 29 ಮಾರ್ಚ್ 2017 (09:11 IST)
ರಾಂಚಿ: ಧೋನಿ ಆಧಾರ್ ಕಾರ್ಡ್ ಮಾಡಿಸಲು ಹೋಗಿ ತೊಂದರೆಗೆ ಸಿಲುಕಿಕೊಂಡಿದ್ದಾರೆ. ವೈಯಕ್ತಿಕ ಮಾಹಿತಿಗಳು ಈಗ ಇಂಟರ್ನೆಟ್ ನಲ್ಲಿ ಬಹಿರಂಗಗೊಂಡಿದ್ದು, ಈ ಬಗ್ಗೆ ಸಾಕ್ಷಿ ಧೋನಿ ಆರೋಪ ಮಾಡಿದ್ದಾರೆ.

 

ಆಧಾರ್ ಕಾರ್ಡ್ ಗೆ ಕೊಡುವ ಮಾಹಿತಿಗಳು ಗೌಪ್ಯವಾಗಿರಬೇಕು ಎಂಬುದೇನೋ ನಿಜ. ಆದರೆ ಸಿಎಸ್ ಸಿ ಇ ಗವರ್ನೆನ್ಸ್ ಸರ್ವಿಸ್ ಧೋನಿ ಆಧಾರ್ ಕಾರ್ಡ್ ಗೆ ಬೆರಳಚ್ಚು ಕೊಡುವ ಫೋಟೋ ಹಾಗೂ ಅವರು ಸಲ್ಲಿಸಿದ ಅರ್ಜಿಯನ್ನು ಫೋಟೋ ಸಮೇತ ಟ್ವಿಟರ್ ನಲ್ಲಿ ಪ್ರಕಟಿಸಿದೆ.

 
ಇದಕ್ಕೆ ತಮ್ಮ ಟ್ವಿಟರ್ ಪುಟದಲ್ಲಿ ಆಕ್ರೋಶ ವ್ಯಕ್ತಪಡಿಸಿದ ಪತ್ನಿ ಸಾಕ್ಷಿ ಸಿಂಗ್, ಎಲ್ಲಿದೆ ಸರ್ಕಾರಿ ವ್ಯವಸ್ಥೆಯಲ್ಲಿ ಗೌಪ್ಯತೆ? ಅರ್ಜಿ ಸಮೇತ ಎಲ್ಲಾ ಮಾಹಿತಿಗಳನ್ನು ಬಹಿರಂಗಗೊಳಿಸಲಾಗಿದೆ. ನಿಜಕ್ಕೂ ಇದು ಬೇಸರದ ಸಂಗತಿ ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್ ನನ್ನು  ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ರವಿಶಂಕರ್ ಪ್ರಸಾದ್ ಗೆ ಲಗತ್ತಿಸಿದ್ದಾರೆ.

 
ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವರು ಮಾಹಿತಿ ಬಹಿರಂಗಗೊಳಿಸುವುದು ಗಂಭೀರ ಅಪರಾಧ. ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ವಿಐಪಿಗಳ ಬಾಡಿಗಾರ್ಡ್ ಗಳು ಕಪ್ಪು ಕನ್ನಡಕ ಧರಿಸುವುದು ಯಾಕೆ ಗೊತ್ತಾ?!