Select Your Language

Notifications

webdunia
webdunia
webdunia
webdunia

ನೋಟು ನಿಷೇಧ ಮಾಡಿದ ಬಿಜೆಪಿಗೆ ಚುನಾವಣೆಯಲ್ಲಿ ತಕ್ಕ ಪಾಠ: ಸಿಎಂ ಅಖಿಲೇಶ್ ಯಾದವ್

ನೋಟು ನಿಷೇಧ ಮಾಡಿದ ಬಿಜೆಪಿಗೆ ಚುನಾವಣೆಯಲ್ಲಿ ತಕ್ಕ ಪಾಠ: ಸಿಎಂ ಅಖಿಲೇಶ್ ಯಾದವ್
ಲಕ್ನೋ , ಭಾನುವಾರ, 25 ಡಿಸೆಂಬರ್ 2016 (15:00 IST)
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನೋಟು ನಿಷೇಧ ಪ್ರಮುಖ ಚುನಾವಣೆ ವಿಷಯವಾಗಿದ್ದು, ನೋಟು ನಿಷೇಧದಿಂದಾಗಿ ಸಂಕಷ್ಟ ಎದುರಿಸಿದ ಜನತೆ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹೇಳಿದ್ದಾರೆ.
 
ನೋಟು ನಿಷೇಧ ಜಾರಿಗೊಳಿಸಿದ್ದರಿಂದ ತೊಂದರೆಗೊಳಗಾದ ಬಡವರು, ಮಧ್ಯಮ ವರ್ಗದವರು ಸೂಕ್ತ ಸಮಯ ಬಂದಾಗ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು. 
 
ಬ್ಯಾಂಕ್‌ಗಳಲ್ಲಿ ಸರದಿಯಲ್ಲಿ ನಿಂತು ಸಾವನ್ನಪ್ಪಿದ 14 ಜನರ ಕುಟುಂಬಗಳಿಗೆ ಸಿಎಂ ಅಖಿಲೇಶ್ ಯಾದವ್ ತಲಾ 2 ಲಕ್ಷ ರೂಪಾಯಿಗಳ ನೆರವು ನೀಡಿದ್ದಾರೆ.
 
ನೋಟು ನಿಷೇಧದಿಂದಾಗಿ ದೇಶದ ಆರ್ಥಿಕತೆಗೆ ಭಾರಿ ಹೊಡೆತ ಬಿದ್ದಿದ್ದು, ಶೀಘ್ರದಲ್ಲಿಯೇ ಚೇತರಿಕೆ ಕಾಣುವ ಯಾವುದೇ ಲಕ್ಷಣಗಳಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
 
ಹಲವು ದಿನಗಳ ಕಾಲ ಬ್ಯಾಂಕ್ ಮುಂದೆ ಸರದಿಯಲ್ಲಿ ನಿಂತಿದ್ದರೂ ಅವರದ್ದೇ ಆದ ಹಣವನ್ನು ಬ್ಯಾಂಕ್‌ನಿಂದ ಪಡೆಯಲು ಸಾಧ್ಯವಾಗದಿರುವುದು ನಿಜವಾಗಿಯೂ ಶೋಚನೀಯ ಸಂಗತಿಯಾಗಿದೆ ಎಂದು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅಸಮಾದಾನ ವ್ಯಕ್ತಪಡಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆ ಟೆಕ್ಕಿಯ ಭೀಕರ ಹತ್ಯೆಗೈದು ಆರೋಪಿ ಪರಾರಿ