Select Your Language

Notifications

webdunia
webdunia
webdunia
webdunia

ನೋಟು ನಿಷೇಧ; ನೆರೆಯ ನೇಪಾಳಕ್ಕೂ ತಟ್ಟಿದ ಬಿಸಿ

ನೋಟು ನಿಷೇಧ; ನೆರೆಯ ನೇಪಾಳಕ್ಕೂ ತಟ್ಟಿದ ಬಿಸಿ
ನವದೆಹಲಿ , ಬುಧವಾರ, 16 ನವೆಂಬರ್ 2016 (08:41 IST)
ದೊಡ್ಡ ಮೊತ್ತದ ಹಳೆಯ ನೋಟುಗಳ ನಿಷೇಧ ಕೇವಲ ಭಾರತೀಯರಿಗೆ ಮಾತ್ರವಲ್ಲದೆ ನೆರೆಯ ನೇಪಾಳಕ್ಕೂ ಸಮಸ್ಯೆಯನ್ನು ತಂದೊಡ್ಡಿದೆ. ಹೀಗಾಗಿ ನೋಟು ವಿನಿಮಯಕ್ಕೆ ಸಹಕರಿಸುವಂತೆ ನೇಪಾಳದ ಪ್ರದಾನಿ ಪ್ರಚಂಡ ಪ್ರಧಾನಿ ಮೋದಿಯವರಲ್ಲಿ ಮನವಿ ಮಾಡಿಕೊಂಡಿದ್ದಾರೆ. 
ಬುಧವಾರ ಪ್ರಧಾನಿ ಮೋದಿಗೆ ಫೋನ್ ಕರೆ ಮಾಡಿದ ಅವರು ನೇಪಾಳ ಮತ್ತು ಗಡಿ ಭಾಗದಲ್ಲಿರುವ ಬಹುತೇಕ ನೇಪಾಳಿಗರ ಬಳಿ 500 ಹಾಗೂ 1,000ರೂಪಾಯಿ ನೋಟುಗಳಿವೆ.
 
ಬಹುತೇಕ ಜನರು ಭಾರತದಲ್ಲಿ ಕೂಲಿ ಮಾಡಿ ಸಂಪಾದಿಸಿದ ಹಣವನ್ನು ವಿನಿಮಯ ಮಾಡಿಕೊಳ್ಳಲಾಗದೆ ಪರದಾಡುತ್ತಿದ್ದಾರೆ. ಭಾರತಕ್ಕೆ ಭೇಟಿ ನೀಡಿದ್ದ ಯಾತ್ರಿಕರು, ಗಡಿಯಲ್ಲಿ ಪ್ಯಾಪಾರ ವಹಿವಾಟು ನಡೆಸುವವರು ಭಾರಿ ಪ್ರಮಾಣದಲ್ಲಿ ಭಾರತೀಯ ನೋಟುಗಳನ್ನು ಹೊಂದಿದ್ದು ಮತ್ತೀಗ ಸಮಸ್ಯೆಗೆ ಸಿಲುಕಿದ್ದಾರೆ. 
 
ಇವರೆಲ್ಲರ ಸಂಕಷ್ಟಕ್ಕೆ ಸ್ಪಂದಿಸಿ ಇಂತಹ ನೋಟುಗಳನ್ನು ಭಾರತದಲ್ಲಿಯೇ ವಿನಿಮಯ ಮಾಡಿಕೊಳ್ಳಲು ಅನುಕೂಲ ಕಲ್ಪಿಸುವಂತೆ ಪ್ರಧಾನಿ ಪ್ರಚಂಡ ಮೋದಿಯವರಲ್ಲಿ ವಿನಂತಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
 
ಅವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಪ್ರಧಾನಿ ಮೋದಿ ಎರಡು ದೇಶಗಳ ಹಣಕಾಸು ಸಚಿವರು ಪರಷ್ಪರ ಚರ್ಚಿಸಿ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನೋಟ್ ಬ್ಯಾನ್ ನಿರ್ಧಾರ ಬಿಜೆಪಿ ನಾಯಕರಿಗೂ ಗೊತ್ತಿರಲಿಲ್ಲ: ಮಧುಸೂದನ್