Select Your Language

Notifications

webdunia
webdunia
webdunia
webdunia

ನಾಳೆಯಿಂದ ನೋಟು ವಿನಿಮಯ 2,000ಕ್ಕೆ ಇಳಿಕೆ, ಮದುವೆಗೆ 2.5 ಲಕ್ಷ ವಿತ್‍ಡ್ರಾ ಮಾಡಬಹುದು

Demonetisation
ನವದೆಹಲಿ , ಗುರುವಾರ, 17 ನವೆಂಬರ್ 2016 (18:11 IST)
ನೋಟು ವಿನಿಮಯಕ್ಕಾಗಿ ಈಗಾಗಲೇ ಹೈರಾಣಾಗಿರುವ ಜನ ಸಾಮಾನ್ಯರಿಗೆ ಸರ್ಕಾರ ಮತ್ತೊಂದು ಶಾಕ್ ನೀಡಿದೆ. ನಾಳೆಯಿಂದ ನೋಟು ಬದಲಾವಣೆ ಮಿತಿಯನ್ನು ರೂಪಾಯಿ 4,500ರಿಂದ 2,000ಕ್ಕೆ ಇಳಿಸಿದೆ. 
 
ನವದೆಹಲಿಯಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನ್ನಾಡುತ್ತಿದ್ದ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ ದಾಸ್ ಶುಕ್ರವಾರದಿಂದ ನೋಟು ವಿನಿಮಯ ಮಿತಿಯನ್ನು 2,000ರೂಪಾಯಿಗೆ ಇಳಿಸಲಾಗುವುದು ಎಂದು ಹೇಳಿದ್ದಾರೆ.
 
ಕೈವೈಸಿ ಆಗಿರುವ ಖಾತೆಗಳಿಂದ ಮದುವೆ ಸಮಾರಂಭಗಳಿಗೆ 2.5 ಲಕ್ಷ ರೂಪಾಯಿಗಳನ್ನು  ವಿತ್‍ಡ್ರಾ ಮಾಡಿಕೊಳ್ಳಬಹುದು  ಎಂದು ಅವರು ತಿಳಿಸಿದ್ದಾರೆ.
 
ಕುಟುಂಬದ ಒಬ್ಬ ಸದಸ್ಯರು, ತಂದೆ ಅಥವಾ ತಾಯಿ ವಿವಾಹಕ್ಕಾಗಿ 2.5 ಲಕ್ಷ ರೂಪಾಯಿಗಳನ್ನು ವಿತ್‌ಡ್ರಾ ಮಾಡಬಹುದು. ಬೆಳೆ ಸಾಲದ ರೈತರು ವಾರಕ್ಕೆ 25.000 ತೆಗೆಯಬಹುದು. ಬೆಳೆ ವಿಮೆಯ ಪ್ರೀಮಿಯಂ ಕಟ್ಟಲು 15 ದಿನ ಗಡು ವಿಸ್ತರಣೆ ಮಾಡಲಾಗಿದೆ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಡವರನ್ನು ಬೀದಿಯಲ್ಲಿ ನಿಲ್ಲಿಸಿ ತುರ್ತು ಪರಿಸ್ಥಿತಿ ಹೇರಿದ ಮೋದಿ: ಜಿ.ಪರಮೇಶ್ವರ್