Select Your Language

Notifications

webdunia
webdunia
webdunia
webdunia

ನೋಟು ನಿಷೇಧ, ನಗದುರಹಿತ ಆರ್ಥಿಕತೆಯನ್ನು ಪಠ್ಯದಲ್ಲಿ ಅಳವಡಿಕೆ: ರಾಜಸ್ಥಾನ್ ಸರಕಾರ

ನೋಟು ನಿಷೇಧ, ನಗದುರಹಿತ ಆರ್ಥಿಕತೆಯನ್ನು ಪಠ್ಯದಲ್ಲಿ ಅಳವಡಿಕೆ: ರಾಜಸ್ಥಾನ್ ಸರಕಾರ
ಜೈಪುರ್ , ಮಂಗಳವಾರ, 24 ಜನವರಿ 2017 (15:45 IST)
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸಿನ ಕೂಸಾದ ನೋಟು ನಿಷೇಧ ಜಾರಿ ಮತ್ತು ನಗದುರಹಿತ ಆರ್ಥಿಕತೆ ಕುರಿತಂತೆ ಮಕ್ಕಳಲ್ಲಿ ಜ್ಞಾನ ಮೂಡಿಸಲು ಪಠ್ಯ ಪುಸ್ತಕಗಳಲ್ಲಿ ಪಠ್ಯವನ್ನು ಅಳವಡಿಸಲು ರಾಜಸ್ಥಾನದ ಸರಕಾರ ನಿರ್ಧರಿಸಿದೆ.
 
ರಾಜಸ್ಥಾನದ ಬೋರ್ಡ್ ಆಫ್ ಸೆಕೆಂಡರಿ ಎಜ್ಯುಕೇಶನ್ ಅಡಳಿತ ಮಂಡಳಿಯ ಕಾರ್ಯದರ್ಶಿ ಮೇಘನಾ ಚೌಧರಿ ಮಾತನಾಡಿ, ಕೇಂದ್ರ ಸರಕಾರ ನಗದು ರಹಿತ ಆರ್ಥಿಕತೆಗೆ ಚಾಲನೆಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದನ್ನು ಗಮನಿಸಿ, ಆರ್ಥಶಾಸ್ತ್ರದ ಪಠ್ಯದಲ್ಲಿ ನೋಟು ನಿಷೇಧ ಮತ್ತು ನಗದುರಹಿತ ಆರ್ಥಿಕತೆ ವಿಷಯ ಅಳವಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. 
 
ನೋಟು ನಿಷೇಧ ಮತ್ತು ನಗದುರಹಿತ ಆರ್ಥಿಕತೆ ಪಠ್ಯವನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೊಳಿಸುವ ಬಗ್ಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
 
ಮುಖ್ಯಮಂತ್ರಿ ವಸುಂಧರಾ ರಾಜೇ ನೇತೃತ್ವದ ಸರಕಾರ ಕೇಂದ್ರ ಸರಕಾರದ ನಗದು ರಹಿತ ಆರ್ಥಿಕತೆಯನ್ನು ವಾಸ್ತವದಲ್ಲಿ ಜಾರಿಗೆ ತರಲು ಚಿಂತನೆ ನಡೆಸಿದೆ. 
 
ದೇಶದಲ್ಲಿಯೇ ನಗದುರಹಿತ ಆರ್ಥಿಕತೆ ಜಾರಿಗೊಳಿಸಿದ ಮಹಾನಗರಗಳಲ್ಲಿ ಅಜ್ಮೀರ್ ಐದನೇ ಸ್ಥಾನ ಪಡೆದಿದೆ. ಜೈಪುರ್ ಮೆಟ್ರೋ ಟಿಕೆಟ್ ಖರೀದಿಯನ್ನು ಸಂಪೂರ್ಣವಾಗಿ ನಗದುರಹಿತಗೊಳಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ರಾಪ್ತ ಸಹೋದರಿಯರ ಮೇಲೆ ಅತ್ಯಾಚಾರವೆಸಗಿದ ಆರೋಪಿ ಅರೆಸ್ಟ್