Select Your Language

Notifications

webdunia
webdunia
webdunia
webdunia

ದೆಹಲಿಯಲ್ಲಿ ಲಾಕ್ ಡೌನ್: ಮದ್ಯದಂಗಡಿ ಮುಂದೆ ಜನರ ಕ್ಯೂ

ದೆಹಲಿಯಲ್ಲಿ ಲಾಕ್ ಡೌನ್: ಮದ್ಯದಂಗಡಿ ಮುಂದೆ ಜನರ ಕ್ಯೂ
ನವದೆಹಲಿ , ಮಂಗಳವಾರ, 20 ಏಪ್ರಿಲ್ 2021 (09:15 IST)
ನವದೆಹಲಿ: ಹೆಚ್ಚುತ್ತಿರುವ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ದೆಹಲಿಯಲ್ಲಿ ನಿನ್ನೆ ರಾತ್ರಿಯಿಂದ ಲಾಕ್ ಡೌನ್ ಜಾರಿಯಾಗಿದೆ. ಸರ್ಕಾರ ಲಾಕ್ ಡೌನ್ ಆದೇಶಿಸುತ್ತಿದ್ದಂತೇ ಜನರು ಮದ್ಯದಂಗಡಿ ಮುಂದೆ ಕ್ಯೂ ನಿಂತಿದ್ದಾರೆ!


ಕಳೆದ ಬಾರಿ ದಿಡೀರ್ ಲಾಕ್ ಡೌನ್ ಘೋಷಿಸಿದಾಗ ಪಾನ ಪ್ರಿಯರು ಮದ್ಯ ಸಿಗದೇ ಹತಾಶೆಗೊಳಗಾಗಿದ್ದರು. ಹೀಗಾಗಿ ಮತ್ತೆ ಅದೇ ಪರಿಸ್ಥಿತಿ ಮರುಕಳಿಸದೇ ಇರಲು ಈ ಬಾರಿ ಲಾಕ್ ಡೌನ್ ಗೆ ಮೊದಲು ಹನುಮಂತನ ಬಾಲದಂತೆ ಉದ್ದ ಕ್ಯೂ ನಿಂತು ಕೈ ತುಂಬಾ ಮದ್ಯದ ಬಾಟಲಿಗಳನ್ನು ಖರೀದಿಸಿ ಮನೆಗೆ ತೆರಳಿದ್ದಾರೆ.

ಅಷ್ಟೇ ಅಲ್ಲ, ಕೊರೋನಾಗೆ ಮದ್ಯ ಸೇವಿಸಿದರೆ ಒಳ್ಳೆಯದು ಎಂದೂ ಕೆಲವು ಪಾನಪ್ರಿಯರು ಅಭಿಪ್ರಾಯಪಟ್ಟಿದ್ದಾರೆ. ಮುಂದಿನ ಸೋಮವಾರದವರೆಗೆ ದೆಹಲಿ ಲಾಕ್ ಡೌನ್ ಗೊಳಗಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಸಚಿವ ಶಿವರಾಜ್ ತಂಗಡಗಿಗೆ ಕೊರೊನಾ