Webdunia - Bharat's app for daily news and videos

Install App

ಪ್ರಿಯತಮೆಯನ್ನು ಕೊಂದು ನೇಣು ಬಿಗಿದುಕೊಂಡ ಶಿಕ್ಷಕ

Webdunia
ಶುಕ್ರವಾರ, 1 ಜುಲೈ 2016 (16:05 IST)
ನೃತ್ಯ ಶಿಕ್ಷಕನೊಬ್ಬ ತನ್ನ ಪ್ರಿಯತಮೆಯನ್ನು ಉಸಿರುಗಟ್ಟಿಸಿ ಕೊಂದು ತಾನು ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ದಕ್ಷಿಣ ದೆಹಲಿಯ ಮೆಹ್ರೌಲಿ ಪ್ರದೇಶದಲ್ಲಿ ಬುಧವಾರ ನಡೆದಿದೆ. 
ಆರೋಪಿ/ಮೃತನನ್ನು ಇಂದೋರ್ ಮೂಲದ ಸೋನು(24) ಎಂದು ಗುರುತಿಸಲಾಗಿದ್ದು ಆತ ತನ್ನ ಬಳಿ ನೃತ್ಯ ಕಲಿಯಲು ಬರುತ್ತಿದ್ದ ಯೋಗಿತಾ ಎಂಬಾಕೆಯನ್ನು ಪ್ರೀತಿಸಿದ್ದ. ಕೆಲ ದಿನಗಳ ಹಿಂದೆ ಆಕೆ ಬೇರೊಬ್ಬನ ಜತೆಯಲ್ಲಿ ಮಾತನ್ನಾಡುತ್ತಿದ್ದಾಗ ಆತನಾಕೆಗೆ ದಬಾಯಿಸಿದ್ದ. ಘಟನೆ ಬಳಿಕ ಆತ ಆಕೆಯನ್ನು ಕೊಲೆಗೈದಿದ್ದಾನೆ.
 
ವಿದ್ಯುತ್ ವೈಯರ್‌ನ್ನು ಕುತ್ತಿಗೆಗೆ ಬಿಗಿದು ಆಕೆಯನ್ನು ಕೊಂದು ತಾನು ಕೂಡ ನೃತ್ಯಶಾಲೆಯ ಕೋಣೆಯಲ್ಲಿದ್ದ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
 
ಮೃತಳ ಸ್ನೇಹಿತರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದು ಯೋಗಿತಾಳಿಗೆ ಬೇರೊಬ್ಬನ ಜತೆ ಪ್ರೇಮ ಸಂಬಂಧವಿದೆ ಎಂದು ಸೋನುಗೆ ಅನುಮಾನವಿತ್ತು ಎಂದು ಅವರು ತಿಳಿಸಿದ್ದಾರೆ. 
 
ಕೊಲೆ ಮತ್ತು ಆತ್ಮಹತ್ಯೆಗೆ ಎರಡು ದಿನಗಳ ಮೊದಲೇ ಆತ ಯೋಜನೆ ರೂಪಿಸಿದ್ದ.  ವಿದ್ಯುತ್ ವೈಯರ್ ತಂದಟ್ಟಿದ್ದು ಮತ್ತು ಮಂಗಳವಾರ ಸಂಜೆ ತರಗತಿಯ ಸಮಯವನ್ನು ಬದಲಾಯಿಸಿದ್ದು ಅದನ್ನು ಪುಷ್ಠೀಕರಿಸಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 
 
ಕಳೆದೆರಡು ದಿನಗಳ ಹಿಂದೆ ಸೋನು 'ಏಕ್ ಗಲ್ತಿ ಫಿರ್ ಸೇ ಹೋಗಯಿ' (ಮತ್ತೊಂದು ತಪ್ಪು ಪುನರಾವರ್ತನೆಯಾಯಿತು) ಎಂದು ವಾಟ್ಸಪ್ ಸ್ಟೇಟಸ್ ಹಾಕಿದ್ದ, ತರಬೇತಿ ನೀಡಲು ತಾನಿಲ್ಲದಿದ್ದರೂ ನೃತ್ಯವನ್ನು ಮುಂದುವರೆಸುವಂತೆ ತನ್ನ ವಿದ್ಯಾರ್ಥಿಗಳ ಬಳಿ ಮನವಿ ಮಾಡಿಕೊಂಡಿದ್ದ ಎಂದು ಮೂಲಗಳು ತಿಳಿಸಿವೆ. 
 
ಬುಧವಾರ ಮುಂಜಾನೆ ಅಕಾಡೆಮಿಯನ್ನು ಸ್ವಚ್ಛಗೊಳಿಸುವ ಕ್ಲೀನರ್ ಇಬ್ಬರು ಸಾವನ್ನಪ್ಪಿರುವುದನ್ನು ನೋಡಿದ್ದಾನೆ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇಸ್ರೇಲ್ ದಾಳಿಗೆ ಗಟ್ಟಿಯಾಗಿ ನಿಲ್ಲುವಂತೆ ಇರಾನ್ ನಾಯಕ ಖಮೇನಿ ಜನತೆಗೆ ಸಂದೇಶ

ಇರಾನ್ ಬೆನ್ನಲ್ಲೇ ಇಸ್ರೇಲ್‌ನಿಂದ ಭಾರತೀಯರನ್ನು ಕರೆತರಲು ಮುಂದಾದ ಕೇಂದ್ರ ಸರ್ಕಾರ

ರಾಹುಲ್ ಗಾಂಧಿ ಜನ್ಮದಿನಕ್ಕೆ ಡಿಕೆಶಿಯಿಂದ ಕಣ್ಣುಗಳೇ ಗಿಫ್ಟ್

Sonia Gandhi: ಹಿರಿಯ ನಾಯಕಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌

Air India Plane Crash: ತಾಯ್ನಾಡಿಗೆ ತಲುಪಿದ ಸಿಬ್ಬಂದಿ ಲಾಮ್‌ನುಂಥೆಮ್‌ ಮೃತದೇಹ

ಮುಂದಿನ ಸುದ್ದಿ
Show comments