Webdunia - Bharat's app for daily news and videos

Install App

ಮಾರುತಿ ಸುಜುಕಿ ಕಾರುಗಳ ಮಾರಾಟದಲ್ಲಿ ಶೇ.13.9 ರಷ್ಟು ಕುಸಿತ

Webdunia
ಶುಕ್ರವಾರ, 1 ಜುಲೈ 2016 (15:14 IST)
ದೇಶದ ಅತಿ ದೊಡ್ಡ ಕಾರು ತಯಾರಿಕಾ ಸಂಸ್ಥೆಯಾಗಿರುವ ಮಾರುತಿ ಸುಜುಕಿ ಪ್ರಮುಖ ಮಾರಾಟಗಾರರ ಘಟಕದಲ್ಲಿ ಅಗ್ನಿ ಅವಘಡ ಸಂಭವಿಸಿರುವ ಹಿನ್ನೆಲೆಯಲ್ಲಿ ಜೂನ್ ತಿಂಗಳ ಒಟ್ಟು ಮಾರಾಟದಲ್ಲಿ 13.9 ಪ್ರತಿಶತ ಕುಸಿತ ಕಂಡು 98,840 ಕಾರುಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಇದೆ ಅವಧಿಯಲ್ಲಿ 1,14,756 ಕಾರುಗಳು ಮಾರಾಟವಾಗಿದ್ದವು.
 
ಮಾರುತಿ ಸುಜುಕಿ ಇಂಡಿಯಾ ಸಂಸ್ಥೆಯ ದೇಶಿಯ ಮಾರಾಟದಲ್ಲಿ 10.2 ಪ್ರತಿಶತ ಕುಸಿತ ಕಂಡು 92,133 ಕಾರುಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಇದೆ ಅವಧಿಯಲ್ಲಿ 1,02,626 ಕಾರುಗಳು ಮಾರಾಟವಾಗಿದ್ದವು.
 
ಆಲ್ಟೋ ಮತ್ತು ವ್ಯಾಗನಾರ್ ಸೇರಿದಂತೆ ಮಿನಿ ಸೆಗ್ಮೆಂಟ್ ಕಾರುಗಳ ಮಾರಾಟದಲ್ಲಿ 19.3 ಪ್ರತಿಶತ ಕುಸಿತ ಕಂಡು 27,712 ಕಾರುಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಇದೆ ಅವಧಿಯಲ್ಲಿ 34,336 ಕಾರುಗಳು ಮಾರಾಟವಾಗಿದ್ದವು ಎಂದು ಮಾರುತಿ ಸುಜುಕಿ ಇಂಡಿಯಾ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
 
ಕಾಪ್ಯಾಕ್ಟ್ ವಿಭಾಗದ ಕಾರುಗಳಾದ ಸ್ವಿಫ್ಟ್, ಎಸ್ಟಿಲೊ, ರಿಟ್ಜ್, ಡಿಜೈರ್, ಬಲೆನೋ ಕಾರುಗಳ ಮಾರಾಟದಲ್ಲಿ 12.5 ಪ್ರತಿಶತ ಕುಸಿತ ಕಂಡು 39,971 ಕಾರುಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಇದೆ ಅವಧಿಯಲ್ಲಿ 45,701 ಕಾರುಗಳು ಮಾರಾಟವಾಗಿದ್ದವು. 
 
ಕಾಪ್ಯಾಕ್ಟ್ ಸೆಡಾನ್ ಡಿಜೈರ್ ಆವೃತ್ತಿಯ ಕಾರುಗಳು ಮಾರಾಟದಲ್ಲಿ 28.5 ಪ್ರತಿಶತ ಕುಸಿತ ಕಂಡು 2,068 ಕಾರುಗಳು ಮಾರಾಟ ಹೊಂದಿದೆ. ಮಧ್ಯಮ ಗಾತ್ರದ ಸೆಡಾನ್ ಸಿಯಾಜ್ ಆವೃತ್ತಿಯ ಕಾರುಗಳ ಮಾರಾಟದಲ್ಲಿ 24.3 ಪ್ರತಿಶತ ಕುಸಿತ ಕಂಡು 2,800 ಕಾರುಗಳು ಮಾರಾಟವಾಗಿದೆ.
 
ಯುಟಿಲಿಟಿ ವಾಹನಗಳಾದ ಜಿಪ್ಸಿ, ಗ್ರ್ಯಾಂಡ್ ವಿಟಾರಾ, ಎರ್ಟಿಗಾ, ಎಸ್-ಕ್ರಾಸ್ ಮತ್ತು ಕಾಂಪ್ಯಾಕ್ಟ್ ಸುವಿ ವಿಟಾರಾ ಬ್ರೆಜ್ಜಾ ಆವೃತ್ತಿಯ ಕಾರುಗಳ ಮಾರಾಟದಲ್ಲಿ 75.5 ಪ್ರತಿಶತ ಹೆಚ್ಚಳವಾಗಿ 9,708 ಕಾರುಗಳು ಮಾರಾಟವಾಗಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments