ದೇಶಾದ್ಯಂತ ಕಾಳ ಧನಿಕರ ಮೇಲಿನ ದಾಳಿ ಮುಂದುವರೆದಿದ್ದು ದೆಹಲಿಯ ಕರೋಲ್ ಬಾಗ್‌ನಲ್ಲಿರುವ ಹೋಟೆಲ್ ಒಂದರ ಮೇಲೆ ದಾಳಿ ಮಾಡಿದ ಪೊಲೀಸರು 5 ಜನರಿಂದ 3.25ಕೋಟಿ ಹಳೆಯ ನೋಟುಗಳನ್ನು ವಶ ಪಡಿಸಿಕೊಂಡಿದ್ದಾರೆ.
ರಹಸ್ಯ ಮಾಹಿತಿಯ ಮೇರೆಗೆ ಆದಾಯ ತೆರಿಗೆ ಅಧಿಕಾರಿಗಳ ಜತೆಗೂಡಿ ಕ್ರೈಮ್ ಬ್ರಾಂಚ್ ಪೊಲೀಸರು ಮಂಗಳವಾರ ತಡ ರಾತ್ರಿ ದಾಳಿಯನ್ನು ಕೈಗೊಂಡಿದ್ದು, ಹೋಟೆಲ್‌ನ ಪ್ರತ್ಯೇಕ ಕೋಣೆಗಳಲ್ಲಿ ಐವರನ್ನು ಬಂಧಿಸಿದ್ದಾರೆ. ಅವರ ಬಳಿ ವಶಪಡಿಸಿಕೊಳ್ಳಲಾದ ಒಟ್ಟು ಹಣ 3.25ಕೋಟಿ ರೂಪಾಯಿ ಎಂದು ಪೊಲೀಸ್ ಜಂಟಿ ಆಯುಕ್ತ( ಕ್ರೈಮ್) ರವೀಂದ್ರ ಯಾದವ್ ತಿಳಿಸಿದ್ದಾರೆ.
ಬಂಧಿತರನ್ನು ಅನ್ಸಾರಿ ಅಬುಜಾರ್, ಫಜಲ್ ಖಾನ್, ಅನ್ಸಾರಿ ಅಫ್ಫನ್, ಲಾಡು ರಾಮ್ ಮತ್ತು ಮಹಾವೀರ್ ಸಿಂಗ್ ಎಂದು ಗುರುತಿಸಲಾಗಿದೆ.
ಈ ಹಣವನ್ನು ಪ್ರತ್ಯೇಕ ಸೂಟ್‌ಕೇಸ್ ಮತ್ತು ಕಾರ್ಡ್ ಬೋರ್ಡ್‌ಗಳಲ್ಲಿ ಇಡಲಾಗಿತ್ತು. ಈ ಹಣ ಮುಂಬೈ ಮೂಲದ ಹವಾಲಾ ನಿರ್ವಾಹಕರಿಗೆ ಸೇರಿದ್ದು ಎಂಬುದು ತನಿಖೆಯಿಂದ ತಿಳಿದು ಬಂದಿದೆ.