Select Your Language

Notifications

webdunia
webdunia
webdunia
webdunia

ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕಚೇರಿಯಲ್ಲಿ ಕಳ್ಳತನ

ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕಚೇರಿಯಲ್ಲಿ ಕಳ್ಳತನ
ನವದೆಹಲಿ , ಶುಕ್ರವಾರ, 30 ಡಿಸೆಂಬರ್ 2016 (14:03 IST)
ಪೂರ್ವದೆಹಲಿಯ ಪಾತಪರ್‌ಗಂಜ್‌ ವಿಧಾನಸಭಾ ಕ್ಷೇತ್ರದ ವಿನೋದ್ ನಗರದಲ್ಲಿರುವ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕಚೇರಿಯಲ್ಲಿ ಕಳ್ಳತನವಾಗಿದ್ದು ಕಳ್ಳರು ಕಂಪ್ಯೂಟರ್‌ಗಳು, ದಾಖಲಾತಿಗಳು, ಸಿಸಿಟಿವಿ ಕ್ಯಾಮರಾ ಮತ್ತು ಡಿವಿಆರ್‌ ಕದ್ದುಕೊಂಡು ಪರಾರಿಯಾಗಿದ್ದಾರೆ.
 
ರಿಸೆಪ್ಶನ್ ಹಾಲ್‌ನಲ್ಲಿರುವ ಕೆಲ ವಸ್ತುಗಳನ್ನು ಕೂಡಾ ಕಳ್ಳರು ತೆಗೆದುಕೊಂಡು ಪರಾರಿಯಾಗಿದ್ದಾರೆ. ಕಳ್ಳತನ ನಿನ್ನೆ ಮಧ್ಯರಾತ್ರಿ ನಡೆದಿರಬಹುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 
 
ಎರಡು ಕಂಪ್ಯೂಟರ್‌ಗಳು, ಲೆಟರ್ ಪ್ಯಾಡ್, ಹಾರ್ಡ್‌ಡಿಸ್ಕ್, ಸಿಸಿಟಿವಿ ಕ್ಯಾಮರಾದ ಡಿಜಿಟಲ್ ವಿಡಿಯೋ ರಿಕಾರ್ಡರ್‌ಗಳ ಕಳ್ಳತನ ಮಾಡಲಾಗಿದೆ. ಕಚೇರಿಯ ಬೀಗ ಮುರಿದು ಕಳ್ಳರು ಒಳಪ್ರವೇಶಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಇಂದು ಬೆಳಿಗ್ಗೆ 9.20 ಗಂಟೆಗೆ ಕಳ್ಳತನವಾದ ಬಗ್ಗೆ ಕರೆ ಬಂದ ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
 
ಸಂಪೂರ್ಣ ಕಚೇರಿಯಲ್ಲಿರುವ ವಸ್ತುಗಳನ್ನು ಅಸ್ತವ್ಯಸ್ಥಗೊಳಿಸಿದ್ದು, ನಿನ್ನೆ ಮಧ್ಯರಾತ್ರಿ ಸುಮಾರು 2.30 ಗಂಟೆಗೆ ಕಚೇರಿಗೆ ಬೀಗ ಹಾಕಲಾಗಿತ್ತು ಎಂದು ಕಚೇರಿಯ ಹೊಣೆಯನ್ನು ಹೊತ್ತಿರುವ ಉಪೇಂದ್ರ ತಿಳಿಸಿದ್ದಾರೆ.
 
ಘಟನೆಯ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದು, ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸುವ ವಿಶ್ವಾಸವಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಭೇಟಿಗೆ ತೆರಳಲಿರುವ ಸಿಎಂ ನೇತೃತ್ವದ ನಿಯೋಗ