Select Your Language

Notifications

webdunia
webdunia
webdunia
webdunia

ದೆಹಲಿ ಕೋಚಿಂಗ್ ಸೆಂಟರ್ ದುರಂತ, ಮತ್ತೇ ಐವರನ್ನು ಬಂಧಿಸಿದ ಪೊಲೀಸರು

ದೆಹಲಿ ಕೋಚಿಂಗ್ ಸೆಂಟರ್ ದುರಂತ, ಮತ್ತೇ ಐವರನ್ನು ಬಂಧಿಸಿದ ಪೊಲೀಸರು

Sampriya

ನವದೆಹಲಿ , ಸೋಮವಾರ, 29 ಜುಲೈ 2024 (12:11 IST)
Photo Courtesy X
ನವದೆಹಲಿ: ಇಲ್ಲಿನ ಓಲ್ಡ್ ರಾಜಿಂದರ್ ನಗರದಲ್ಲಿ ಐಎಎಸ್ ಕೋಚಿಂಗ್ ಸೆಂಟರ್‌ಗೆ ನೀರು ನುಗ್ಗಿ ಮೂವರು ಐಎಎಸ್ ಆಕಾಂಕ್ಷಿಗಳು ಮೃತಪಟ್ಟ ಪ್ರಕರಣ ಸಂಬಂಧ ಇದೀಗ ಪೊಲೀಸರು ಮತ್ತೇ ಐವರನ್ನು ಬಂಧಿಸಿದ್ದಾರೆ.

ಡಿಸಿಪಿ (ಕೇಂದ್ರ) ಎಂ ಹರ್ಷ ವರ್ಧನ್ ಅವರು ಎಎನ್‌ಐ ಜತೆ ಮಾತನಾಡಿ,  ಕೋಚಿಂಗ್ ಸೆಂಟರ್‌ನಲ್ಲಿ ನಡೆದ ಅವಘಡಕ್ಕೆ ಸಂಬಂಧಿಸಿದಂತೆ ಮತ್ತೇ ಐವರನ್ನು ಬಂಧಿಸಲಾಗಿದೆ. ಈ ಘಟನೆಯಲ್ಲಿ ಯಾರೇ ತಪ್ಪು ಮಾಡಿದರೂ ಬಿಡುವುದಿಲ್ಲ. ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮಕೈಗೊಳ್ಳುತ್ತೇವೆ ಹಾಗೂ ಈ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುತ್ತಿದ್ದೇವೆ ಎಂದರು.

ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಏಳಕ್ಕೇರಿದೆ. ಬಂಧಿತರಲ್ಲಿ ಕಟ್ಟಡದ ಮಾಲೀಕರೂ ಸೇರಿದ್ದಾರೆ.

ಶನಿವಾರ ಸುರಿದ ಭಾರೀ ಮಳೆಗೆ ಹಳೆ ರಾಜಿಂದರ್ ನಗರದ ರಾವು ಸ್ಟಡಿ ಸರ್ಕಲ್‌ನಲ್ಲಿನೆಲಮಹಡಿಯಲ್ಲಿದ್ದ ಕೋಚಿಂಗ್ ಸೆಂಟರ್‌ಗೆ ನೀರು ನುಗ್ಗಿದೆ. ಘಟನೆಯಲ್ಲಿ ಮೂವರು ಐಎಎಸ್ ಆಕಾಂಕ್ಷಿಗಳು ಸಾವನ್ನಪ್ಪಿದ್ದಾರೆ/

Share this Story:

Follow Webdunia kannada

ಮುಂದಿನ ಸುದ್ದಿ

ಶಿರೂರು ಭೂಕುಸಿತ: ನಾಪತ್ತೆಯಾದವರ ಪತ್ತೆ ಕಾರ್ಯ ಮುಂದುವರೆಸುವಂತೆ ರಾಜ್ಯಕ್ಕೆ ಕೇರಳ ಸಚಿವ ಮನವಿ