Publish Date: Wed, 08 Nov 2017 (09:54 IST)
Updated Date: Wed, 08 Nov 2017 (09:56 IST)
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯ ಮಿತಿಮೀರಿದ್ದು, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ವಿಮಾನ ಯಾನ, ರೈಲು ಸಂಚಾರ ಅಸ್ತವ್ಯಸ್ತವಾಗಿದೆ.
ಕಳೆದ ಮೂರು ದಿನಗಳಿಂದ ಹೊಗೆಯಿಂದ ಕೂಡಿದ ವಾತಾವರಣವಿದ್ದು, ತೀವ್ರ ವಾಯು ಮಾಲಿನ್ಯವಾಗಿದೆ. ಈ ವಾತಾವರಣ ಇನ್ನೂ ಮೂರು ದಿನ ಮುಂದುವರಿಯುವ ನಿರೀಕ್ಷೆಯಿದೆ.
ದೀಪಾವಳಿಯ ನಂತರ ಕಳೆದ ವರ್ಷವೂ ಚಳಿಗಾಲ ಪ್ರಾರಂಭದಲ್ಲಿ ದೆಹಲಿಯಲ್ಲಿ ಇದೇ ವಾತಾವರಣ ಸೃಷ್ಟಿಯಾಗಿತ್ತು. ಇದೀಗ ಮತ್ತೆ ಅಂತಹದ್ದೇ ಸಮಸ್ಯೆ ಎದುರಾಗಿದ್ದು, ವಾಹನ ಸಂಚಾರವೂ ಕಷ್ಟವಾಗಿದೆ. ವಿಷಪೂರಿತ ಅನಿಲದಿಂದಾಗಿ ಆರೋಗ್ಯ ಸಮಸ್ಯೆಗಳೂ ಎದುರಾಗುವ ಅಪಾಯವಿರುವುದರಿಂದ ಆದಷ್ಟು ಹೊರಗೆ ಸುತ್ತಾಡುವುದನ್ನು ಕಡಿಮೆ ಮಾಡುವಂತೆ ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ