Select Your Language

Notifications

webdunia
webdunia
webdunia
webdunia

ಜಯಾ ನಿವಾಸ ಸ್ಮಾರಕವಾಗಿಸುವ ಸರಕಾರದ ತೀರ್ಮಾನಕ್ಕೆ ದೀಪಾ ವಿರೋಧ

ಜಯಾ ನಿವಾಸ ಸ್ಮಾರಕವಾಗಿಸುವ ಸರಕಾರದ ತೀರ್ಮಾನಕ್ಕೆ ದೀಪಾ ವಿರೋಧ
ಚೆನ್ನೈ , ಶುಕ್ರವಾರ, 18 ಆಗಸ್ಟ್ 2017 (16:16 IST)
ದಿವಂಗತ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ನಿವಾಸವನ್ನು ಸ್ಮಾರಕವಾಗಿ ಪರಿವರ್ತಿಸುವ ತಮಿಳುನಾಡು ಸರಕಾರದ ನಿರ್ಧಾರವನ್ನು ಜಯಾ ಸೋದರ ಸೊಸೆ ಜೆ.ದೀಪಾ ವಿರೋದಿಸಿದ್ದು ಸರಕಾರದ ನಿರ್ಧಾರವನ್ನು ಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಹೇಳಿದ್ದಾರೆ.
ಕಳೆದ ಗುರುವಾರ, ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಜಯಲಲಿತಾ ಮರಣದ ತನಿಖೆ ನಡೆಸಲು ವಿಚಾರಣಾ ಆಯೋಗವನ್ನು ನೇಮಕ ಮಾಡುವುದಲ್ಲದೇ ಜಯಲಲಿತಾ ಅವರ ವೇದ ನಿಲಯಂ ನಿವಾಸವನ್ನು ಸ್ಮಾರಕವಾಗಿ ಪರಿವರ್ತಿಸುವುದಾಗಿ ಘೋಷಿಸಿದ್ದರು.
 
ಮುಖ್ಯಮಂತ್ರಿ ಪಳನಿಸ್ವಾಮಿ ಪೊಯೀಸ್ ಗಾರ್ಡನ್ ಆಸ್ತಿಯನ್ನು ಸ್ಮಾರಕವಾಗಿ ಘೋಷಿಸುವ ಹಿಂದೆ ಏನೋ ಉದ್ದೇಶವಿದೆ. ನನಗೆ ಜಯಲಲಿತಾ ನಿವಾಸದ ಮೇಲೆ ಹಕ್ಕು ಸಾಧಿಸಲು ನೈತಿಕ ಮತ್ತು ಕಾನೂನುಬದ್ಧವಾದ ಹಕ್ಕಿದೆ ಎಂದು ತಿರುಗೇಟು ನೀಡಿದ್ದಾರೆ. 
 
ಜಯಲಲಿತಾ ನಿವಾಸವನ್ನು ಸ್ಮಾರಕವಾಗಿ ಪರಿವರ್ತಿಸುವ ಬಗ್ಗೆ ಸರಕಾರ ನಮ್ಮೊಂದಿಗೆ ಸಂಪರ್ಕಿಸಿಲ್ಲ. ನಮ್ಮನ್ನು ಸಂಪರ್ಕಿಸದೆ ತೀರ್ಮಾನ ತೆಗೆದುಕೊಂಡಿದೆ. ಸರಕಾರದ ನಡೆಯ ವಿರುದ್ಧ ಕೋರ್ಟ್‌ನಲ್ಲಿ ದಾವೆ ಹೂಡುತ್ತೇವೆ ಎಂದು ತಿಳಿಸಿದ್ದಾರೆ.
 
ಮಾಜಿ ಸಿಎಂ ದಿವಂಗತ ಜಯಲಲಿತಾ ನಿಧನವಾದ ಹಲವು ತಿಂಗಳುಗಳ ನಂತರ ದೀಪಾ, ಜಯಲಲಿತಾ ಜನ್ಮದಿನದಂದು ಎಂಜಿಆರ್ ಅಮ್ಮಾ ದೀಪಾ ಪೆರಾವೈ ಎನ್ನುವ ರಾಜಕೀಯ ಸಂಘಟನೆ ಸ್ಥಾಪಿಸಿದ್ದರು.
 
ಜಯಲಲಿತಾ ನಿಧನದಿಂದ ತೆರವಾಗಿದ್ದ ಆರ್‌.ಕೆ.ನಗರ್ ವಿಧಾನಸಭೆ ಉಪ ಚುನಾವಣೆಗಾಗಿ ಕಳೆದ ಏಪ್ರಿಲ್ 12 ರಂದು ದೀಪಾ ನಾಮಪತ್ರ ಸಲ್ಲಿಸಿದ್ದರು. ಆದರೆ, ಚುನಾವಣೆಯಲ್ಲಿ ಹಣದ ದುರ್ಬಳಕೆ ನಡೆದಿದೆ ಎನ್ನುವ ಹಿನ್ನೆಲೆಯಲ್ಲಿ ಚುನಾವಣೆ ಆಯೋಗ ಚುನಾವಣೆಯನ್ನು ರದ್ದುಗೊಳಿಸಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಕಾರ್ಪೋರೇಟ್‌ ಕಂಪೆನಿಗಳಿಂದ ಭಾರಿ ದೇಣಿಗೆ ಪಡೆದ ಬಿಜೆಪಿ: ಎಡಿಆರ್