Select Your Language

Notifications

webdunia
webdunia
webdunia
webdunia

ಅಪ್ಪ ಬಚ್ಚಿಟ್ಟಿದ್ದ 50ಸಾವಿರ ಮೊತ್ತದ ಹಳೆ ನೋಟು; ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ

ಅಪ್ಪ ಬಚ್ಚಿಟ್ಟಿದ್ದ 50ಸಾವಿರ ಮೊತ್ತದ ಹಳೆ ನೋಟು; ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ
ಭೋಪಾಲ್ , ಶನಿವಾರ, 21 ಜನವರಿ 2017 (12:27 IST)
ಸಾಯುವ ಮುನ್ನ ತನ್ನ ತಂದೆ ಬಚ್ಚಿಟ್ಟಿದ್ದ 50,000 ರೂಪಾಯಿ ಮೊತ್ತದ ಹಳೆ ನೋಟುಗಳನ್ನು ಬದಲಾಯಿಸಿಕೊಳ್ಳಲು ಆರ್‌ಬಿಐ ಕಚೇರಿಗೆ ಹೋಗಿದ್ದ ವ್ಯಕ್ತಿಯೊಬ್ಬನಿಗೆ ನಿರಾಸೆಯಾಗಿದೆ. ನೋಟುಗಳನ್ನು ಬದಲಾಯಿಸಿ ಕೊಡಲು ಆರ್‌ಬಿಐ ನಿರಾಕರಿಸಿದೆ. 

 
ಮಧ್ಯಪ್ರದೇಶದ ಭೂಪಾಲ್‌ ನಿವಾಸಿ ಮಸ್ತಾನ್ ಸಿಂಗ್ ಎದುರಿಸುತ್ತಿರುವ ದುರದೃಷ್ಟಕರ ಕಥೆ ಇದು. ಮಸ್ತಾನ್ ತಂದೆ 93 ವರ್ಷದ ಶಿವಚರಣ್ ಸಿಂಗ್ ಡಿಸೆಂಬರ್ 26 ರಂದು ವಯೋಸಹಜ ಕಾಯಿಲೆಗೊಳಗಾಗಿ ಸಾವನ್ನಪ್ಪಿದ್ದರು. ಸಾವಿನೋತ್ತರದ ಎಲ್ಲ ವಿಧಿವಿಧಾನಗಳನ್ನು ಪೂರೈಸಿ ತಿಥಿ ಮಾಡಲೆಂದು ಮನೆಯನ್ನು ಸ್ವಚ್ಛಗೊಳಿಸುತ್ತಿದ್ದಾಗ ಅವರ ಕೋಣೆಯ ಕಪಾಟಿನಲ್ಲಿ 50 ಸಾವಿರ ಮೌಲ್ಯದ 500 ರೂ ಮುಖಬೆಲೆಯ ನೋಟುಗಳು ಸಿಕ್ಕಿವೆ. ಸಾಯುವ ಸಂದರ್ಭದಲ್ಲಿ ಶಿವಚರಣ್ ಸಿಂಗ್ ಜ್ಞಾಪಕ ಶಕ್ತಿಯನ್ನು ಸಹ ಕಳೆದುಕೊಂಡಿದ್ದರು. ಹೀಗಾಗಿ ಈ ಹಣದ ಕುರಿತು ಅವರು ಮನೆಯ ಸದಸ್ಯರಿಗೆ ತಿಳಿಸಿರಲಿಲ್ಲ. 
 
ಮತ್ತೀಗ ಈ ಹಳೆಯ ನೋಟುಗಳನ್ನು ಬದಲಾಯಿಸಿಕೊಳ್ಳಲು ಮಸ್ತಾನ್ ಆರ್‌ಬಿಐ ಕಚೇರಿಗೆ ತೆರಳಿದ್ದಾನೆ. ಆದರೆ ನಿಯಮಾವಳಿಗಳ ಪ್ರಕಾರ ಹಳೆ ನೋಟು ಸ್ವೀಕರಿಸುವ ಗಡುವು ಮುಗಿದಿದೆ. ಮತ್ತೀಗ ಆನಿವಾಸಿ ಭಾರತೀಯರು ಮಾತ್ರ ಹಣವನ್ನು ಬದಲಾಯಿಸಿಕೊಳ್ಳಬಹುದು, ಎಂದು ಆತನನ್ನು ವಾಪಸ್ ಕಳುಹಿಸಲಾಗಿದೆ. 
 
ತಂದೆಯ ಮರಣ ಪತ್ರ ಮತ್ತು ಆಸ್ಪತ್ರೆಯ ದಾಖಲೆಗಳನ್ನು ತೋರಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮಸ್ತಾನ್ ಅಳಲು ತೋಡಿಕೊಂಡಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ದಾರಿ ಕಾಣದಂತಾಗಿದ್ದು ಹೇಗೆ ಈ ನೋಟುಗಳನ್ನು ಬದಲಾಯಿಸಿಕೊಳ್ಳಲಿ ಎಂಬ ಯೋಚನೆಗೆ ಬಿದ್ದಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ನರಮಾಂಸ ಭಕ್ಷಣೆ; ನೀವೆಂದೂ ಕೇಳರಿಯದ ಬೀಭತ್ಸ ಕೃತ್ಯವಿದು!