DC ಅಪಾಯಕಾರಿ ಎಂದು ಘೋಷಿಸಿದ್ದರು,ಇಂದ್ರಾಯಣಿ ನದಿ ಸೇತುವೆ ದುರಂತ ನಡೆದಿದೆ: ಸಿಎಂ ಫಡಣವೀಸ್‌

Sampriya
ಸೋಮವಾರ, 16 ಜೂನ್ 2025 (19:51 IST)
Photo Credit X
ಮುಂಬೈ: ಪುಣೆ ಜಿಲ್ಲೆಯ ಮಾವಲ್ ತೆಹಸಿಲ್‌ನಲ್ಲಿ ಇಂದ್ರಾಯಣಿ ನದಿಯ ಕುಂದಮಾಲಾ ಸೇತುವೆ ಕುಸಿದು ನಾಲ್ವರು ಮೃತಪಟ್ಟು 51 ಮಂದಿ ಗಾಯಗೊಂಡ ಸಂಬಂಧ ಪ್ರತಿಕ್ರಿಯಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸೋಮವಾರ ಈ ಕಟ್ಟಡವನ್ನು "ಅಪಾಯಕಾರಿ" ಎಂದು ಜಿಲ್ಲಾಧಿಕಾರಿ ಘೋಷಿಸಿದ್ದರು ಎಂದು ಹೇಳಿದರು. 

ಆದರೆ ಪ್ರವಾಸೊಗಿಗೆ ಇದರ ಅರಿವಿಲ್ಲದೆ ಹೋಗಿದ್ದಾರೆ ಎಂದರು. ಉಪಮುಖ್ಯಮಂತ್ರಿಗಳಾದ ಏಕನಾಥ್ ಶಿಂಧೆ ಮತ್ತು ಪುಣೆ ಜಿಲ್ಲಾ ಉಸ್ತುವಾರಿ ಸಚಿವ ಅಜಿತ್ ಪವಾರ್ ಅವರು ಈ ವಿಷಯದಲ್ಲಿ ಸೂಕ್ತ ಕ್ರಮಕ್ಕೆ ಭರವಸೆ ನೀಡಿದರು.

ಸ್ಥಳದಲ್ಲಿ ಎನ್‌ಡಿಆರ್‌ಎಫ್ ನೇತೃತ್ವದ ಹುಡುಕಾಟ ಮತ್ತು ಪಾರುಗಾಣಿಕಾ (ಎಸ್ & ಆರ್) ಕಾರ್ಯಾಚರಣೆಯನ್ನು ಸೋಮವಾರ ಮುಕ್ತಾಯಗೊಳಿಸಲಾಯಿತು.

"ಈ ಸೇತುವೆಯನ್ನು ಜಿಲ್ಲಾಧಿಕಾರಿಗಳು ಅಪಾಯಕಾರಿ ಎಂದು ಘೋಷಣೆ ಮಾಡಿದ್ದರು. ಅದಲ್ಲದೆ ಗ್ರಾಮಸ್ಥರು ಎಚ್ಚರಿಕೆ ಫಲಕಗಳನ್ನು ಸಹ ಹಾಕಿದ್ದರು. ಸೇತುವೆಯ ಸ್ಥಿತಿಯ ತೀವ್ರತೆಯ ಬಗ್ಗೆ ಪ್ರವಾಸಿಗರಿಗೆ ತಿಳಿದಿರಲಿಲ್ಲ" ಎಂದು ರಾಜ್ಯ ಗೃಹ ಸಚಿವರೂ ಆಗಿರುವ ಫಡ್ನವಿಸ್ ಪಾಲ್ಘರ್ ಜಿಲ್ಲೆಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಘಟನೆಯ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶಿಂಧೆ ಹೇಳಿದ್ದಾರೆ. ಇದಲ್ಲದೆ, ಇದೇ ರೀತಿಯ ದುರಂತಗಳನ್ನು ತಡೆಗಟ್ಟಲು ರಾಜ್ಯದ ನದಿಗಳಿಗೆ ಅಡ್ಡಲಾಗಿರುವ ಎಲ್ಲಾ ಸೇತುವೆಗಳ ರಚನಾತ್ಮಕ ಲೆಕ್ಕಪರಿಶೋಧನೆಯನ್ನು ಈಗ ನಡೆಸಲಾಗುವುದು ಎಂದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಡಿ.ಕೆ.ಶಿವಕುಮಾರ್‌ ಬೆನ್ನಲ್ಲೇ ಹಾಸನಾಂಬೆಯ ಆಶೀರ್ವಾದ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ

ಆಯುರ್ವೇದ ಚಿಕಿತ್ಸೆಗಾಗಿ ಭಾರತಕ್ಕೆ ಬಂದಿದ್ದ ಕೀನ್ಯಾ ಮಾಜಿ ಪ್ರಧಾನಿ ನಿಧನ: ಮೋದಿ ಸಂತಾಪ

ಹೃದಯಸ್ತಂಭನ: ಗೋವಾದ ಎರಡು ಬಾರಿಯ ಮುಖ್ಯಮಂತ್ರಿ, ಹಾಲಿ ಸಚಿವ ರವಿ ನಾಯ್ಕ್ ನಿಧನ

ಆರೆಸ್ಸೆಸ್ ಬೆದರಿಕೆ ಕರೆ ಎಂದು ತೋರಿಸಿದ ಪ್ರಿಯಾಂಕ್ ಖರ್ಗೆಗೆ ನಿಮ್ಮ ನಂಬರ್ ಸುಲಭಕ್ಕೆ ಸಿಗುತ್ತಾ ಎಂದು ಪ್ರಶ್ನಿಸಿದ ಪಬ್ಲಿಕ್

ಆರೆಸ್ಸೆಸ್ ನಿಷೇಧಿಸಲು ಕಾಂಗ್ರೆಸ್ ನಿಂದ ಸಾಧ್ಯವಿಲ್ಲ: ವಿಜಯೇಂದ್ರ

ಮುಂದಿನ ಸುದ್ದಿ
Show comments