ಕಾಮದ ಕಿಚ್ಚು: ಸೊಸೆ ಜೊತೆಯೇ ಓಡಿಹೋಗಿ ಮದುವೆಯಾದ ಮಾವ..!

ಸೋಮವಾರ, 3 ಜುಲೈ 2017 (09:03 IST)
ಕಾಮದ ಹುಚ್ಚಿಗೆ ಬಿದ್ದವರು ಮಾನವೀಯ ಸಂಬಂಧಗಳಿಗೆ ಬೆಲೆ ಕೊಡುವುದೇ ಇಲ್ಲ ಎಂಬುದಕ್ಕೆ ಈ ಪ್ರಕರಣ ಸಾಕ್ಷಿ. ಮಾವನೊಬ್ಬ ಸ್ವಂತ ಸೊಸೆ ಜೊತೆ ಲವ್ವಿಡವ್ವಿ ನಡೆಸಿ ಓಡಿಹೋಗಿ ದೇವಸ್ಥಾನದಲ್ಲಿ ಮದುವೆಯಾಗಿರುವ ಘಟನೆ ಬಿಹಾರದ ಪುರ್ಣಿಯಾದಿಂದ ವರದಿಯಾಗಿದೆ.

ಅಪ್ಪನ ಕುಕೃತ್ಯದಿಂದ ರೋಸಿಹೋದ ಮಗ ಪೊಲೀಸ್ ಠಾಣೆಗೆ ದೂರು ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ದೂರಿನ ಮೇರೆಗೆ ಕೂಡಲೇ ಕೃತ್ಯಾನಂದ್ ಠಾಣೆಯ ಪೊಲೀಸರು ತಂದೆಯನ್ನ ಬಂಧಿಸಿದ್ದಾರೆ. ಆದರೆ, ಮಾವನನ್ನೇ ಮದುವೆಯಾಗಿದ್ದ ಸೊಸೆ ಪೊಲೀಸ್ ಠಾಣೆಗೆ ಬಂದು ಬಿಡುಗಡೆಗೆ ಒತ್ತಾಯಿಸಿದ್ದಾಳೆ. ನಾವಿಬ್ಬರೂ ಮದುವೆಯಾಗಿದ್ದು, ಸಂಸಾರ ಮಾಡುವುದಾಗಿ ಹೇಳಿದ್ದಾಳೆ.

ವರದಿಗಳ ಪ್ರಕಾರ, ಹಲವು ವರ್ಷಗಳಿಂದ ಮಾವ ಮತ್ತು ಸೊಸೆ ನಡುವೆ ಅಕ್ರಮ ಸಂಬಂಧವಿತ್ತು. ಇದೀಗ, ಓಡಿಹೋಗಿ ಪುರಂದೇವಿ ದೇಗುಲದಲ್ಲಿ ಮದುವೆಯಾಗಿದ್ಧಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮನಮೋಹನ್ ಸಿಂಗ್ 10 ವರ್ಷದ ದಾಖಲೆಯನ್ನ ಮೂರೇ ವರ್ಷಗಳಲ್ಲಿ ಮುರಿದ ಮೋದಿ: ರಮ್ಯಾ ಟ್ವಿಟ್