Webdunia - Bharat's app for daily news and videos

Install App

ಮುಸ್ಲಿಂ ಮಹಿಳೆಯರು ಹೇರ್ ಕಟ್, ಐಬ್ರೋ ಶೇಪ್ ಮಾಡಿಸುವುದು ನಿಷೇಧ

Webdunia
ಭಾನುವಾರ, 8 ಅಕ್ಟೋಬರ್ 2017 (13:28 IST)
ನವದೆಹಲಿ: ಇನ್ನು ಮುಂದೆ ಮುಸ್ಲಿಂ ಮಹಿಳೆಯರು ತಲೆಕೂದಲಿಗೆ ಕತ್ತರಿ ಹಾಕುವಂತಿಲ್ಲ. ಐಬ್ರೋ ಶೇಪ್ ಮಾಡಿಸುವಂತಿಲ್ಲ ಎಂದು ಉತ್ತರ ಪ್ರದೇಶ ಇಸ್ಲಾಮಿಕ್ ಉನ್ನತ ಶಿಕ್ಷಣ ಸಂಸ್ಥೆ ದರುಲ್ ಉಲೂಮ್ ದಿಯೋಬಂದ್ ಫತ್ವಾ ಹೊರಡಿಸಿದೆ.

ತಲೆಗೂದಲು ಕತ್ತರಿಸುವುದು ಮತ್ತು ಐಬ್ರೋ ಶೇಪ್ ಮಾಡಿಸುವುದು ಮುಸ್ಲಿಂ ಧರ್ಮದ ಪ್ರಕಾರ ತಪ್ಪು. ಹೀಗಾಗಿ  ಹುಬ್ಬನ್ನು ಆಕಾರಗೊಳಿಸುವುದು, ತೆಗೆಯುವುದು ಇತ್ಯಾದಿ ಮಾಡಬಾರದು ಎಂದಿದೆ. ನನ್ನ ಪತ್ನಿಗೆ ಐಬ್ರೋ ಶೇಪ್ ಮಾಡಿಸಲು ಮತ್ತು ತಲೆ ಕೂದಲು ಕತ್ತರಿಸಲು ಅವಕಾಶವಿದೆಯೆ..? ಮುಸ್ಲಿಂ ಧರ್ಮದ ಕಾನೂನು ಈ ಬಗ್ಗೆ ಏನು ಹೇಳುತ್ತದೆ ಎಂದು ಸಹರಾನ್ಪುರದ ಮುಸ್ಲಿಂ ವ್ಯಕ್ತಿಯೊಬ್ಬರು ಪ್ರಶ್ನಿಸಿದ್ದರು. ಈ ಹಿನ್ನೆಲೆ ಹೊಸ ಫತ್ವಾ ಹೊರಡಿಸಲಾಗಿದೆ.

ಒಂದು ವೇಳೆ ಮುಸಲ್ಮಾನ ಮಹಿಳೆಯರು ಹೀಗೆ ಮಾಡಿದರೆ ಅದು ಮುಸ್ಲಿಂ ಕಾನೂನು ಉಲ್ಲಂಘನೆ ಎಂದು ಫತ್ವಾದಲ್ಲಿ ಸೂಚಿಸಲಾಗಿದೆ. ಆದರೆ ಈ ಫತ್ವಾಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments