Select Your Language

Notifications

webdunia
webdunia
webdunia
webdunia

ತಾಯಿಯಿಲ್ಲದ ವೇಳೆ ಪುತ್ರಿಗೆ ತಂದೆಯಿಂದ ಕರಾಳ ಕೃತ್ಯ

father
ranchi , ಗುರುವಾರ, 14 ಡಿಸೆಂಬರ್ 2023 (09:53 IST)
ತನ್ನ ಅಪ್ಪನ ಈ ಕೀಚಕತನದಿಂದ ರೋಸಿ ಹೋದ ಬಾಲಕಿ ಈ ಕುರಿತು ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ತನ್ನ ತಂದೆಯ ವಿರುದ್ಧ ದೂರು ದಾಖಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.

ರಾಂಚಿ ಜಿಲ್ಲಾಸ್ಪತ್ರೆಯಲ್ಲಿ ಬಾಲಕಿಯ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದ್ದು, ಆಕೆಗೆ ಬಾಲ ಮಂದಿರದಲ್ಲಿ ಆಶ್ರಯವನ್ನು ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಪಾಪಿ ಅಪ್ಪನೊಬ್ಬ ತನ್ನ ಮಗಳ ಮೇಲೆ ಒಂದು ವರ್ಷದಿಂದ ನಿರಂತರವಾಗಿ ಅತ್ಯಾಚಾರವೆಸಗಿದ ಅಮಾನವೀಯ ಘಟನೆ ಜಾರ್ಕಂಡ್‌ ರಾಜ್ಯದ ರಾಂಚಿ ಜಿಲ್ಲೆಯ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
 
ತಾಯಿ ಇಲ್ಲದ ಬಾಲಕಿ ಮನೆಯಲ್ಲಿ ಒಬ್ಬಳೆ ಇದ್ದಾಗ ತಂದೆ ಆಕೆಯನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ ಎಂದು ತಿಳಿದು ಬಂದಿದೆ. ಬಾಲಕಿಯನ್ನು ರಕ್ಷಿಸಲು ಸಫಲರಾಗಿರುವ ಮಕ್ಕಳ ರಕ್ಷಣಾ ಘಟಕ ಆಕೆಗೆ ಜಾರ್ಕಂಡ್‌ನ ರಾಂಚಿಯ ಬಾಲಮಂದಿರದಲ್ಲಿ ರಕ್ಷಣೆಯನ್ನು ಕಲ್ಪಿಸಿದೆ. 

ಆರೋಪಿ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಹಾಯ ಧನಕ್ಕಾಗಿ ವಿವಾಹ: ನಂತ್ರ ಆತ ಮಾಡಿದ್ದೇನು ಗೊತ್ತಾ?