Select Your Language

Notifications

webdunia
webdunia
webdunia
webdunia

ಜಯಲಲಿತಾ ಅಕ್ರಮ ಆಸ್ತಿ ಪ್ರಕರಣ: ತೀಪು೯ ಕಾಯ್ದಿರಿಸಿದ ಸುಪ್ರೀ೦

ಜಯಲಲಿತಾ ಅಕ್ರಮ ಆಸ್ತಿ ಪ್ರಕರಣ:  ತೀಪು೯ ಕಾಯ್ದಿರಿಸಿದ ಸುಪ್ರೀ೦
ನವದೆಹಲಿ , ಬುಧವಾರ, 8 ಜೂನ್ 2016 (08:38 IST)
ತಮಿಳುನಾಡು ಸಿಎಂ ಜಯಲಲಿತಾ ಅವರ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಫೆಬ್ರವರಿ 23ರಿಂದ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಸುಪ್ರೀಂಕೋರ್ಟ್ ತೀರ್ಪನ್ನು ಕಾದಿರಿಸಿದೆ.
 
ಜಯಲಲಿತಾ, ಸಹ ಆರೋಪಿಗಳಾದ ಎನ್.ಶಶಿಕಲಾ, ಜೆ. ಇಳವರಸಿ ಮತ್ತು ವಿ. ಎನ್. ಸುಧಾಕರನ್ ಅವರನ್ನು ಅಕ್ರಮ ಆಸ್ತಿ ಗಳಿಕೆ ಆರೋಪದಿಂದ ಮುಕ್ತಗೊಳಿಸಿ ಕರ್ನಾಟಕ ಹೈಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಮತ್ತು ಇತರರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಕಳೆದ ಫೆಬ್ರವರಿ 23ರಂದು ಕೈಗೆತ್ತಿಕೊಂಡಿದ್ದ ಸುಪ್ರೀ೦ಕೋಟ್‍೯ನ ರಜಾ ಅವಧಿಯ ನ್ಯಾಯಪೀಠ 20 ದಿನಗಳ ವಿಚಾರಣೆಯನ್ನು ಮುಗಿಸಿದೆ. 
 
2014ರಲ್ಲಿ ತೀಪು೯ ನೀಡಿದ್ದ ವಿಶೇಷ ನ್ಯಾಯಾಲಯ ಜಯಲಲಿತಾ ಮತ್ತು ಇತರ ಮೂವರಿಗೆ ಅಪರಾಧಿ ಎಂದು ಪರಿಗಣಿಸಿ 4 ವಷ೯ ಜೈಲು ಶಿಕ್ಷೆ, 100 ಕೋಟಿ ರೂ. ದ೦ಡ ಪ್ರಕಟಿಸಿತ್ತು. ಈ ತೀರ್ಪಿನ ವಿರುದ್ಧ ಜಯಾ ಮತ್ತು ಸಹ ಆರೋಪಿಗಳು ಹೈಕೋರ್ಟ್‌ನಲ್ಲಿ ಮೇನ್ಮನವಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಕನಾ೯ಟಕ ಹೈಕೋಟ್‍೯ 2015 ಮೇ 11ರ೦ದು ಜಯಲಲಿತಾ, ಮೂವರು ಆರೋಪಿಗಳನ್ನು ದೋಷಮುಕ್ತಗೊಳಿಸಿತ್ತು.
 
ಈ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಮತ್ತು ಇತರರು ಹೈಕೋರ್ಟ್ ಮೆಟ್ಟಿಲೇರಿದ್ದರು. 
 
ನ್ಯಾಯಮೂರ್ತಿ ಪಿ. ಸಿ. ಘೋಷ್ ಮತ್ತು ಅಮಿತಾವ್‌ ರಾಯ್ ಅವರನ್ನು ಒಳಗೊಂಡ ನ್ಯಾಯಪೀಠ  ಅರ್ಜಿ ವಿಚಾರಣೆ ನಡೆಸಿತ್ತು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನೈಜೇರಿಯಾ ಮೂಲದವರಿಗೆ ಗೋವಾ ಪ್ರವೇಶಕ್ಕೆ ನಿಷೇಧ ಹೇರಿ: ಮಾಜಿ ಸಿಎಂ