Publish Date: Thu, 21 Sep 2017 (13:36 IST)
Updated Date: Thu, 21 Sep 2017 (13:38 IST)
ಸಿಆರ್`ಪಿಎಫ್ ಯೂನಿಟ್ ಮೇಲೆ ಭಯೋತ್ಪಾದಕರು ನಡೆಸಿರುವ ದಾಳಿಯಲ್ಲಿ ಮೂವರು ನಾಗರಿಕರು ಮೃತಪಟ್ಟು, 20ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಟ್ರಾಲ್ ಪ್ರದೇಶದಲ್ಲಿ ನಡೆದಿದೆ.
ಮೊದಲಿಗೆ ಗ್ರೆನೇಡ್ ದಾಳಿ ನಡೆಸಿದ ಉಗ್ರರು ಬಳಿಕ ಗುಂಡಿನ ದಾಳಿ ನಡೆಸಿದ್ದಾರೆ. ಗಾಯಗೊಂಡವರ ಪೈಕಿ 7 ಮಂದಿ ಸಿಆರ್`ಪಿಎಫ್ ಜವಾನರು ಸೇರಿದ್ದಾರೆ. ಜಮ್ಮುವಿನ ಸಚಿವ ನಯೀಮ್ ಅಖ್ತರ್ ಯೋಜನೆಯೊಂದರ ಉದ್ಘಾಟನೆಗೆ ಟ್ರಾಲ್`ಗೆ ತೆರಳಿದ್ದ ಸಂದರ್ಭವೇ ಈ ದಾಳಿ ನಡೆದಿದೆ.
ಉರಿ ದಾಳಿ ಬಳಿಕ ಅಂತಹದ್ದೇ ದಾಳಿಗಳನ್ನ ನಡೆಸಲು ಭಯೋತ್ಪಾದಕರು ಸಂಚು ರೂಪಿಸಿರುವ ಬಗ್ಗೆ ಇತ್ತೀಚೆಗೆ ಗುಪ್ತಚರ ಸಂಸ್ಥೆ ಸೇನೆಗೆ ಮಾಹಿತಿ ನೀಡಿತ್ತು. ಈ ಮಾಹಿತಿ ಆಧರಿಸಿ ಗಸ್ತು ಮತ್ತು ಭದ್ರತೆ ಹೆಚ್ಚಿಸಲಾಗಿತ್ತು. ಆದರೂ ಉಗ್ರರು ಸಿಆರ್`ಪಿಎಫ್ ಯೂನಿಟ್ ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ