ರಾಜಸ್ಥಾನದ ಚಿತೋಡ್‌ಗಡ್ ಜಿಲ್ಲೆಯಲ್ಲಿ ಒಬ್ಬ ವಿವಾಹಿತೆಯ ಅಪಹರಣ ಮತ್ತು ಅವಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಹೇಯ ಕೃತ್ಯ ವರದಿಯಾಗಿದೆ .
ವಿಚಿತ್ರವೆಂದರೆ, ಆಕೆಯ ಪತಿ ಸೇರಿದಂತೆ ಆತನ ಕುಟುಂಬದ ಸದಸ್ಯರು ಅಪಹರಣಕ್ಕೀಡಾಗಿ ಅತ್ಯಾಚಾರಕ್ಕೊಳಗಾದ ಮಹಿಳೆಯನ್ನೇ ಅಪರಾಧಿ ಎಂಬಂತೆ ಬಿಂಬಿಸಿ ಮನೆಯಿಂದ ಹೊರಹಾಕಿದ ಘಟನೆ ವರದಿಯಾಗಿದೆ
ಘೊಸುಂಡಾ ಗ್ರಾಮದ ನಿವಾಸಿಯಾಗಿದ್ದ 22 ವರ್ಷದ ವಿವಾಹಿತ ಮಹಿಳೆ ತನ್ನ ಮಾವನ ಜೊತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ತೆರಳಿ ಘಟನೆಯ ಬಗ್ಗೆ ದೂರು ನೀಡಿದ್ದಾಳೆ ಎಂದು ಜಿಲ್ಲೆಯ ಚಂದೇರಿಯಾ ಠಾಣೆಯ ಪೋಲಿಸರು ತಿಳಿಸಿದ್ದಾರೆ.
ಆಕೆಯ ಪತಿ ನೂರಾರು ಕಿಲೋ ಮೀಟರ್ ದೂರದ ಆಂದ್ರಪ್ರದೇಶದಲ್ಲಿ ಐಸ್‌ಕ್ರೀಮ್ ಮಾರುತ್ತಿದ್ದಾನೆ. ಪತಿಯ ಜೊತೆಗೆ ಕನ್ನೋಜ್ ನಿವಾಸಿಯಾದ ಅವರ ಅತ್ತೆಯ ಮಗ ರತನ್‌ಲಾಲ್ ಕೂಡ ಕಾರ್ಯನಿರ್ವಹಿಸುತ್ತಿದ್ದಾನೆ.
ಕಳೆದ ಜುಲೈ 15 ರಂದು ರತನ್‌ಲಾಲ್, ಘೊಸುಂಡಾ ಗ್ರಾಮದಲ್ಲಿರುವ ಮಹಿಳೆಯ ಮನೆಗೆ ಬಂದು,ನಿನ್ನ ಪತಿ ನಿನ್ನನ್ನು ಕರೆದುಕೊಂಡು ಬರುವಂತೆ ಹೇಳಿದ್ದಾನೆ ಎಂದು ಸುಳ್ಳು ಹೇಳಿ ಆಕೆಯನ್ನು ಕರೆದುಕೊಂಡು ಹೋಗಿದ್ದಾನೆ.
ಮೈದುನನಾದ ಕಾರಣ ಆತನ ಮೇಲೆ ವಿಶ್ವಾವಿರಿಸಿ ಮಹಿಳೆ ಆತನೊಂದಿಗೆ ಹೋಗಿದ್ದಾಳೆ. ರತನ್‌ಲಾಲ್, ಶಂಭುಪುರಾಗೆ ಕರೆದುಕೊಂಡು ಬಂದು ಅಲ್ಲಿಂದ ನೇರವಾಗಿ ಮಹಾರಾಷ್ಟ್ರದ ಔರಂಗಾಬಾದ್‌ಗೆ ಕರೆದುಕೊಂಡು ಹೋಗಿದ್ದಾನೆ.
ಆರೋಪಿ ರತನ್‌ಲಾಲ್ ಔರಂಗಾಬಾದ್‌ನಲ್ಲಿರುವ ಸ್ವಂತ ಅಣ್ಣನ ಮನೆಯಲ್ಲಿ ಮಹಿಳೆಯನ್ನು ಬಂಧಿಯಾಗಿಟ್ಟಿದ್ದಾನೆ. ತನ್ನ ಇಬ್ಬರು ಗೆಳೆಯರೊಂದಿಗೆ ಸೇರಿ ಮೂರು ದಿನಗಳವರೆಗೆ ಆಕೆಯ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ್ದಾನೆ. ಪೋಲಿಸರು ಈ ಪ್ರಕರಣದ ಕುರಿತು ದೂರು ದಾಖಲಿಸಿಕೋಂಡು ತನಿಖೆ ಪ್ರಾರಂಭಿಸಿದ್ದಾರೆ ಎಂದು ಪೊಲೀಸ್ ಅದಿಕಾರಿಗಳು ತಿಳಿಸಿದ್ದಾರೆ.