2013ರಿಂದ 2023ರ ನಡುವೆ ದಲಿತರ ಮೇಲಿನ ಅಪರಾಧ ಹೆಚ್ಚಳ: ಮಲ್ಲಿಕಾರ್ಜುನ ಖರ್ಗೆ

Sampriya
ಶುಕ್ರವಾರ, 10 ಅಕ್ಟೋಬರ್ 2025 (17:17 IST)
ನವದೆಹಲಿ: ಹರಿಯಾಣದ ಐಪಿಎಸ್ ಅಧಿಕಾರಿ ವೈ ಪುರಾಣ್ ಕುಮಾರ್ ಅವರ ಆತ್ಮಹತ್ಯೆ ಸಂಬಂಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ರೋಶ ಹೊರಹಾಕಿದರು. 

ದಲಿತ ಮತ್ತು ಆದಿವಾಸಿ ಜನರ ಮೇಲೆ ಹೆಚ್ಚುತ್ತಿರುವ ಅಪರಾಧಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶುಕ್ರವಾರ ಕಟುವಾಗಿ ಟೀಕಿಸಿದ್ದಾರೆ. 

ರಾಯ್ಬರೇಲಿಯಲ್ಲಿ ಇತ್ತೀಚೆಗೆ ದಲಿತ ವ್ಯಕ್ತಿಯೊಬ್ಬನನ್ನು ಕಳ್ಳನೆಂದು ತಪ್ಪಾಗಿ ಭಾವಿಸಿ ಥಳಿಸಿ ಕೊಂದು ಹಾಕಿದ ಘಟನೆಗಳ ಹಿನ್ನೆಲೆಯಲ್ಲಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

ಇದು ಆರ್‌ಎಸ್‌ಎಸ್-ಬಿಜೆಪಿಯ ಊಳಿಗಮಾನ್ಯ ಮನೋಭಾವದ ಅಪಾಯಕಾರಿ ದ್ಯೋತಕ ಎಂದು ಹೇಳಿದರು.

2013 ಮತ್ತು 2023 ರ ನಡುವೆ ದಲಿತರ ಮೇಲಿನ ಅಪರಾಧಗಳಲ್ಲಿ ಶೇಕಡಾ 46 ರಷ್ಟು ಏರಿಕೆಯಾಗಿದೆ ಮತ್ತು ಆದಿವಾಸಿಗಳ ಮೇಲಿನ ಅಪರಾಧಗಳಲ್ಲಿ ಶೇಕಡಾ 91 ರಷ್ಟು ಹೆಚ್ಚಳವಾಗಿದೆ ಎಂದರು. 

 
ಹರಿಯಾಣದಲ್ಲಿ ಐಪಿಎಸ್ ಅಧಿಕಾರಿ ವಿರುದ್ಧದ ಜಾತಿ ತಾರತಮ್ಯ, ಹರಿಓಂ ವಾಲ್ಮೀಕಿ ಕಿರುಕುಳ, ಸಿಜೆಐ ಮೇಲಿನ ದಾಳಿ ಮತ್ತು ಅದನ್ನು ಸಮರ್ಥಿಸಿಕೊಳ್ಳುವ ಬಿಜೆಪಿ ಮನಸ್ಥಿತಿ, ಬಿಜೆಪಿ ಆಡಳಿತವಿರುವ ರಾಜಸ್ಥಾನದ ಸವಾಯಿ ಮಾಧೋಪುರ ಜಿಲ್ಲೆಯಲ್ಲಿ ದಲಿತ ಮಹಿಳೆ ಕಮಲಾ ದೇವಿ ರಾಯ್‌ಗರ್‌ ಮೇಲಿನ ದೌರ್ಜನ್ಯ  ಇವೆಲ್ಲವೂ ಕಾಂಗ್ರೆಸ್‌ನ ಇತ್ತೀಚಿನ ಘಟನೆಗಳಲ್ಲ, ಬಿಜೆಪಿಯ ಅಪಾಯಕಾರಿ ಮನಸ್ಥಿತಿ ಎಂದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಮುಖ ಘಟ್ಟದಲ್ಲಿರುವ ದೆಹಲಿ ಸ್ಫೋಟ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ

ಶಬರಿಮಲೆಯಲ್ಲಿ ಭಕ್ತರಿಗೆ ತೊಂದರೆ, ಕೇರಳ ಸರ್ಕಾರಕ್ಕೆ ಕ್ಲಾಸ್ ತೆಗೆದುಕೊಂಡ ಅಣ್ಣಾಮಲೈ

ಜೆಡಿಎಸ್‌ನಲ್ಲಿಯೇ ಇರುತ್ತಿದ್ದರೆ ದೇವೇಗೌಡ, ಅವರ ಮಕ್ಕಳು ಸಿಎಂ ಆಗಕ್ಕೆ ಬಿಡ್ತಿರ್ಲಿಲ್ಲ: ಸಿದ್ದರಾಮಯ್ಯ

ದೆಹಲಿ ವಿಮಾನವೇರಿದ ಡಿಕೆಶಿ, ಶಾಸಕರನ್ನು ಇಲ್ಲೇ ಕಟ್ಟಿಹಾಕಲು ಸಿಎಂ ಮಾಸ್ಟರ್ ಪ್ಲಾನ್‌

ದೆಹಲಿ, ಶಿಕ್ಷಕರ ಇದೇ ನಡವಳಿಕೆಯಿಂದ ಮಗ ಪ್ರಾಣ ಕಳೆದುಕೊಂಡ

ಮುಂದಿನ ಸುದ್ದಿ
Show comments