Select Your Language

Notifications

webdunia
webdunia
webdunia
webdunia

ಗೋವು ಹಿಂದೂಗಳಿಗೆ ಮಾತ್ರವಲ್ಲ, ಮುಸ್ಲಿಮರಿಗೂ ತಾಯಿ

ಗೋವು ಹಿಂದೂಗಳಿಗೆ ಮಾತ್ರವಲ್ಲ, ಮುಸ್ಲಿಮರಿಗೂ ತಾಯಿ
ಹರಿದ್ವಾರ , ಬುಧವಾರ, 24 ಆಗಸ್ಟ್ 2016 (11:25 IST)
ಆಕಳು ಕೇವಲ ಹಿಂದೂಗಳಿಗೆ ಮಾತ್ರವಲ್ಲ, ಮುಸ್ಲಿಂ ಧರ್ಮದವರಿಗೂ ತಾಯಿ ಎಂದು ದ್ವಾರಕಾಶಾರದಾ ಪೀಠಾಧೀಶ್ವರ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಮಂಗಳವಾರ ಹೇಳಿದ್ದಾರೆ.

ಗೋವಿನ ಹಾಲು ಅದನ್ನು ಪೂಜಿಸುವವರಿಗಷ್ಟೇ ಅಲ್ಲ ಇತರರಿಗೂ ಉಪಯುಕ್ತ. ಈ ತಾಯಿಯ ಹಾಲು ಕುಡಿದು ಹಿಂದೂಗಳಿಗೆ ಎಷ್ಟು ಪ್ರೋಟಿನ್ ಸಿಗುತ್ತದೆಯೋ ಮುಸ್ಲಿಮರಿಗೂ ಅಷ್ಟೇ ಸಿಗುತ್ತದೆ. ಹೀಗಾಗಿ ಆಕಳು ನಮಗಷ್ಟೇ ಅಲ್ಲ, ಮುಸ್ಲಿಂ ಧರ್ಮದವರಿಗೂ ತಾಯಿ ಎಂದು ಹೇಳುವುದು ಸಂಪೂರ್ಣವಾಗಿ ಸರಿ ಎಂದು ಸ್ವಾಮಿ ಪ್ರತಿಪಾದಿಸಿದ್ದಾರೆ.
 
ಆಕಳನ್ನು ರಕ್ಷಿಸುವುದು ಎಲ್ಲ ಭಾರತೀಯರ ಕರ್ತವ್ಯ. ಅವರು ಯಾವ ಧರ್ಮಕ್ಕೆ ಸೇರಿದವರು ಎಂಬ ಪ್ರಶ್ನೆ ಇಲ್ಲಿ ಏಳುವುದಿಲ್ಲ. ದೇಶದ ವಿವಿಧ ಭಾಗಗಳಲ್ಲಿ ಗೋ ಹತ್ಯೆಯನ್ನು ತಪ್ಪಿಸಲು ಏಕರೂಪವಾದ ಕಾನೂನು ಜಾರಿಗೆ ಬರಬೇಕು. ಇದರಲ್ಲಿ ಯಾವುದೇ ತಪ್ಪಿಲ್ಲ. ಎಂದು ಅವರು ಆಗ್ರಹಿಸಿದ್ದಾರೆ.
 
ಗೋ ಹತ್ಯೆ ಕಾನೂನಿನ ವಿರುದ್ಧ  ಅನೇಕ ಬಾರಿ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಆದರೆ ಅವು ಯಾವಾಗಲೂ ತಿರಸ್ಕರಿಸಲ್ಪಟ್ಟಿವೆ ಎಂದು ಅವರು ಖೇದ ವ್ಯಕ್ತ ಪಡಿಸಿದ್ದಾರೆ.
 
ಆಕಳ ಉಪಯುಕ್ತತೆ ಬಗ್ಗೆ ಮಾತನಾಡಿದ ಅವರು, ಆಕೆಯ ಹಾಲಿನಿಂದ ಕೇವಲ ಪೋಷ್ಟಿಕಾಂಶಗಳು ಸಿಗುವುದಷ್ಟೇ ಅಲ್ಲ. ಗೋಮೂತ್ರದಿಂದ ಅನೇಕ ಕಾಯಿಲೆಗಳನ್ನು ಕಡಿಮೆ ಮಾಡಬಹುದು. ಸಾವಿನ ನಂತರ ಅದರ ಎಲುಬು ಮತ್ತು ಚರ್ಮ ಕೂಡ ಬಹಳ ಪ್ರಯೋಜನಕಾರಿ ಎಂದ ಅವರು ಗೋಮಾಂಸ ಮಾರಾಟವನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಹೋರಾಟದಿಂದಲೇ ಭಾರತಕ್ಕೆ ಸ್ವಾತಂತ್ರ್ಯ: ಸಚಿವ ಕಾಗೋಡು ತಿಮ್ಮಪ್ಪ