ಪ್ರಯಾಗ್ ರಾಜ್: ಪವಿತ್ರ ಕುಂಭಮೇಳಕ್ಕೆ ಬಂದು ಚಿಕನ್ ತಯಾರಿಸಿದ ದಂಪತಿಯ ಟೆಂಟ್ ಕಿತ್ತು ಬಿಸಾಕಿ ಸಾಧುಗಳು ಆಕ್ರೋಶ ವ್ಯಕ್ತಪಡಿಸಿದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಹಾಕುಂಭಮೇಳ ಎನ್ನುವುದು ಹಿಂದೂಗಳ ಪವಿತ್ರ ಉತ್ಸವವಾಗಿದೆ. ಇಲ್ಲಿ ಮಾಂಸಾಹಾರ ನಿಷೇಧಿಸಲಾಗಿದೆ. ಅಲ್ಲದೆ, ಮದ್ಯ, ಸಿಗರೇಟು ಅಂತಹ ಉತ್ಪನ್ನಗಳಿಗೂ ಅವಕಾಶವಿಲ್ಲ. ಆದರೆ ಇಂತಹ ಪ್ರದೇಶದಲ್ಲಿ ಚಿಕನ್ ಬೇಯಿಸಿ ದಂಪತಿಯೊಂದು ಅಪಚಾರವೆಸಗಿದೆ.
ಇದು ಸಾಧುಗಳ ಆಕ್ರೋಶಕ್ಕೆ ಗುರಿಯಾಗಿದೆ. ಟೆಂಟ್ ಹಾಕಿಕೊಂಡು ಚಿಕನ್ ಬೇಯಿಸಿದ ದಂಪತಿಯನ್ನು ಸಾಧುಗಳು ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಅವರ ಟೆಂಟ್ ಕಿತ್ತು ಹಾಕಿ ಆಹಾರ ಪದಾರ್ಥವನ್ನೂ ಚೆಲ್ಲಿದ್ದಾರೆ.
ಅಲ್ಲದೆ ಇಂತಹ ಅಪಚಾರವೆಸಗಿದ ದಂಪತಿಯನ್ನು ಸಾಧುಗಳು ಅಲ್ಲಿಂದ ಓಡಿಸಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರೂ ದಂಪತಿಯ ಕೆಲಸಕ್ಕೆ ಫುಲ್ ಗರಂ ಆಗಿದ್ದಾರೆ.