Select Your Language

Notifications

webdunia
webdunia
webdunia
webdunia

ಸಾಕ್ಷಿ ಸಾಧನೆ ದೇಶಕ್ಕೆ ಹೆಮ್ಮೆ: ರಾಷ್ಟ್ರಪತಿ, ಪ್ರಧಾನಿ

Country
ನವದೆಹಲಿ , ಗುರುವಾರ, 18 ಆಗಸ್ಟ್ 2016 (15:14 IST)
ರಿಯೋ ಓಲಂಪಿಕ್ಸ್‌ನಲ್ಲಿ ಭಾರತಕ್ಕೆ ಚೊಚ್ಚಲ ಪದಕ ತಂದುಕೊಟ್ಟ ಕುಸ್ತಿ ಪಟು ಸಾಕ್ಷಿ ಮಲ್ಲಿಕ್‌ಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಐತಿಹಾಸಿಕ ಸಾಧನೆಯ ಮೂಲಕ ಅವರು ದೇಶ ಹೆಮ್ಮೆ ಪಡುವಂತೆ ಮಾಡಿದ್ದಾರೆ ಎಂದು ಉಭಯ ದಿಗ್ಗಜರು ಸಂತಷ ವ್ಯಕ್ತ ಪಡಿಸಿದ್ದಾರೆ.

"ರಿಯೋ ಓಲಂಪಿಕ್ಸ್‌ನ ಮಹಿಳಾ ಕುಸ್ತಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿರುವ ಸಾಕ್ಷಿ ಮಲ್ಲಿಕ್ ಅವರಿಗೆ ಹೃದಯ ಪೂರ್ವಕ ಅಭಿನಂದನೆಗಳು. ಅವರು ದೇಶಕ್ಕೆ ಹೆಮ್ಮೆಯನ್ನುಂಟು ಮಾಡಿದ್ದಾರೆ", ಎಂದು ರಾಷ್ಟ್ರಪತಿ ಮುಖರ್ಜಿ ತಮ್ಮ ಅಧಿಕೃತ ಟ್ವಿಟರ್‌ನಲ್ಲಿ ಬರೆದಿದ್ದಾರೆ. 
 
ಕಂಚು ಗೆದ್ದಿರುವ ಸಾಕ್ಷಿ ಸಾಧನೆ ಪವಿತ್ರ ರಕ್ಷಾಬಂಧನಕ್ಕೆ ದೇಶಕ್ಕೆ ದೊರೆತಿರುವ ಉಡುಗೊರೆ. ಭಾರತದ ಪುತ್ರಿಯ ಈ ಸಾಧನೆ ದೇಶದ ಕ್ರೀಡಾಪಟುಗಳಿಗೆ ಸ್ಪೂರ್ತಿದಾಯಕವಾಗಿರಲಿದೆ ಎಂದು ಪ್ರಧಾನಿ ಮೋದಿ ಅವರು ದೇಶಕ್ಕೆ ಬಂದ ಚೊಚ್ಚಲ ಗೆಲುವನ್ನು ಟ್ವೀಟ್ ಮೂಲಕ ವ್ಯಾಖ್ಯಾನಿಸಿದ್ದಾರೆ.
 
ಟ್ವೀಟ್ ಮೂಲಕ ದೇಶದ ಜನರಿಗೆ ಮೋದಿ ಅವರು ರಕ್ಷಾ ಬಂಧನದ ಶುಭಾಶಯಗಳನ್ನು ಸಹ ಕೋರಿದ್ದಾರೆ. 
 
ದೇಶದ ನೋವಿನ ಕಾಯುವಿಕೆಗೆ ನಿನ್ನೆ ರಾತ್ರಿ ಅಂತ್ಯ ಹಾಡಿದ್ದ ಸಾಕ್ಷಿ  58 ಕೆಜಿ ವಿಭಾಗದ ಮಹಿಳಾ ಕುಸ್ತಿಯಲ್ಲಿ ಕಂಚಿನ ಪದಕವನ್ನು ಗೆದ್ದು ಬೀಗಿದ್ದರು. ಮೊದಲು ಪರದಾಡಿದ ಅವರು ಕೊನೆಯ ಕ್ಷಣದಲ್ಲಿ ಭರ್ಜರಿ ಪ್ರದರ್ಶನ ನೀಡುವುದರ ಮೂಲಕ 8-5ರಲ್ಲಿ ಪಂದ್ಯವನ್ನು ಗೆದ್ದಿದ್ದರು. 
 
ಒಟ್ಟಾರೆ ಹೇಳುವುದಾದರೆ ಭಾರತದ ಓಲಂಪಿಕ್ಸ್ ಸಾಧನೆ ಇತಿಹಾಸದಲ್ಲಿ ಪದಕ ಗೆದ್ದಿರುವ ನಾಲ್ಕನೇ ಮಹಿಳೆ ಎನ್ನಿಸಿಕೊಂಡಿದ್ದಾರೆ ಸಾಕ್ಷಿ. 

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ .

Share this Story:

Follow Webdunia kannada

ಮುಂದಿನ ಸುದ್ದಿ

ಅಧಿಕಾರದ ಮದ: ಪೊಲೀಸ್‌ಗೆ ಶಾಸಕನಿಂದ ಕಪಾಳಮೋಕ್ಷ