Select Your Language

Notifications

webdunia
webdunia
webdunia
webdunia

ಭೃಷ್ಟಾಚಾರದ ಸುಳಿಯಲ್ಲಿ ಸಿಐಡಿ ಎಸ್‌ಪಿ ಮಧುರವೀಣಾ

ಭೃಷ್ಟಾಚಾರ
ಸಿಐಡಿ ಎಸ್‌ಪಿ ಮಧುರವೀಣಾ ಅವರ ವಿರುದ್ಧ ಭೃಷ್ಟಾಚಾರದ ಆರೋಪ ಕೇಳಿಬಂದಿದೆ.
 
ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂದು ಆರೋಪಿಸಿ ರಮಡ ಹೊಟೆಲ್‌ನ ರೂಮ್ ನಂಬರ್ 308ರ ಮೇಲೆ ದಾಳಿ ನಡೆಸಿದ್ದ ಮಧುರವೀಣಾ ಅವರ ತಂಡಕ್ಕೆಯಾವುದೇ ರೀತಿಯ ದಾಖಲೆಗಳು, ಸಾಕ್ಷ್ಯ ಸಿಕ್ಕಿರಲಿಲ್ಲ. ಅಲ್ಲಿ ಇಬ್ಬರು ಯುವತಿಯರಿದ್ದು ಅವರಿಬ್ಬರು ಆನ್ಲೈನ್ ಮೂಲಕ ರೂಮ್ ಬುಕ್ ಮಾಡಿದವರಾಗಿದ್ದರು.  ಆದರೆ ಕೇಸ್ ದಾಖಲಿಸುವ ಬೆದರಿಕೆ ಒಡ್ಡಿ ಎಸ್‌ಪಿ 2 ಲಕ್ಷ ರೂಪಾಯಿಗಳನ್ನು ವಸೂಲಿ ಮಾಡಿದ್ದರು. ಬಳಿಕವೂ ಮತ್ತೆ ಕೇಸ್ ದಾಖಲಿಸುವ ಬೆದರಿಕೆ ಹಾಕಿದ್ದರು ಎಂದು ಹೊಟೆಲ್ ಮಾಲೀಕರು ಮಧುರವೀಣಾ ಮತ್ತು ಅವರ ತಂಡದ ವಿರುದ್ಧ ಪ್ರಕರಣ ದಾಖಲಿಸಿದ್ದರು. 
 
ಈ ಕುರಿತು ತನಿಖೆ ನಡೆಸಿದ್ದ ಸಿಐಡಿ ಡಿಐಜಿ ಸೋನಿಯಾ ನಾರಂಗ್ ನೇತೃತ್ವದ ತಂಡ ಇಂದು ಸಿಐಡಿ ಡಿಜಿಪಿ ಕಿಶೋರ್ ಚಂದ್ರ ಅವರಿಗೆ ಹಸ್ತಾಂತರ ಮಾಡಿದೆ. 
 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ .
 

Share this Story:

Follow Webdunia kannada