Select Your Language

Notifications

webdunia
webdunia
webdunia
webdunia

ಭ್ರಷ್ಟ, ಅಪ್ರಾಮಾಣಿಕರಿಗೆ ಕಾದಿದೆ ಮಾರಿಹಬ್ಬ: ಪ್ರಧಾನಿ ಮೋದಿ ಗುಡುಗು

ಭ್ರಷ್ಟ, ಅಪ್ರಾಮಾಣಿಕರಿಗೆ ಕಾದಿದೆ ಮಾರಿಹಬ್ಬ: ಪ್ರಧಾನಿ ಮೋದಿ ಗುಡುಗು
ಮುಂಬೈ , ಭಾನುವಾರ, 25 ಡಿಸೆಂಬರ್ 2016 (14:28 IST)
ಭ್ರಷ್ಟರು ಮತ್ತು ಅಪ್ರಾಮಾಣಿಕರಿಗೆ ಡಿಸೆಂಬರ್ 30ರ ನಂತರ ಕಾದಿದೆ ಮಾರಿಹಬ್ಬ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
 
ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಆಯೋಜಿಸಲಾದ ಸಭೆಯಲ್ಲಿ ಮಾತನಾಡಿದ ಮೋದಿ, ನೋಟು ನಿಷೇಧ ಬಿಕ್ಕಟ್ಟು ಅಂತ್ಯವಾಗಲು ದೇಶದ ಜನತೆಗೆ 50 ದಿನದ ಸಮಯ ಕೇಳಿದ್ದೇನೆ. ದೇಶದ ಜನತೆ ನನಗೆ ಬೆಂಬಲ ನೀಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. 
 
ಪ್ರಾಮಾಣಿಕರಾಗಿರುವ ಜನರ ಸಂಕಷ್ಟಗಳು ನಿಧಾನವಾಗಿ ಅಂತ್ಯಗೊಳ್ಳಲಿವೆ. ಡಿಸೆಂಬರ್ 30 ರವರೆಗೆ ಬ್ಯಾಂಕ್‌ಗಳಲ್ಲಿ ಹಳೆಯ 500 ಮತ್ತು 1000 ನೋಟುಗಳನ್ನು ಜಮ ಮಾಡಬಹುದಾಗಿದೆ ಎಂದರು.
 
ದೇಶದ ಜನತೆ ಭ್ರಷ್ಟಾಚಾರ ಮತ್ತು ಕಪ್ಪು ಹಣವನ್ನು ಸಹಿಸುವುದಿಲ್ಲ. ಕೆಲವರು ಕಪ್ಪುಹಣದ ಪರವಾಗಿದ್ದು ಇಲ್ಲ ಸಲ್ಲದ ವದಂತಿಗಳನ್ನು ಹರಡಿಸುತ್ತಿದ್ದಾರೆ. ಆದರೆ, ಭ್ರಷ್ಟಾಚಾರಿಗಳನ್ನು ಮಟ್ಟಹಾಕುವವರೆಗೆ ಹೋರಾಟ ನಿಲ್ಲದು ಎಂದು ಘೋಷಿಸಿದರು.
 
ಕೆಲವರು ಬ್ಯಾಂಕ್ ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಕಪ್ಪು ಹಣವನ್ನು ಬದಲಿಸಬಹುದು ಎಂದು ಭಾವಿಸಿದ್ದರು. ಅಂತಹ ಪ್ರಭಾವಿಗಳಿಗೆ ಬೆಂಬಲ ನೀಡಿದ ಅಧಿಕಾರಿಗಳು ಕೂಡಾ ಸಂಕಷ್ಟ ಬಲೆಯೊಳಗೆ ಬಿದ್ದಿದ್ದಾರೆ ಎಂದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಕಪ್ಪು ಸಮುದ್ರದಲ್ಲಿ ಪತ್ತೆಯಾಯ್ತು ರಷ್ಯನ್ ವಿಮಾನದ ಅವಶೇಷ