ನವದೆಹಲಿ: ಕೊರೋನಾ ವಿರುದ್ಧ ಮಕ್ಕಳಿಗೂ ಲಸಿಕೆ ಕಂಡುಕೊಂಡಿರುವ ಭಾರತ್ ಬಯೋಟೆಕ್ ಸಂಸ್ಥೆ ಇದೀಗ 2-6 ವರ್ಷದೊಳಗಿನ ಮಕ್ಕಳಿಗೆ ಎರಡನೇ ಹಂತದ ಪ್ರಯೋಗಕ್ಕೆ ಮುಂದಾಗಿದೆ.
ಈಗಾಗಲೇ ಒಂದು ಡೋಸ್ ನೀಡಲಾಗಿದ್ದು, ಆ ಮಕ್ಕಳಿಗೆ ಎರಡನೇ ಡೋಸ್ ಪ್ರಯೋಗ ಮಾಡಲಾಗುತ್ತದೆ. ಮುಂದಿನ ವಾರ ಲಸಿಕೆ ಪ್ರಯೋಗ ಮಾಡುವ ಸಾಧ‍್ಯತೆಯಿದೆ.
ಈ ಹಂತದಲ್ಲೂ ಯಶಸ್ವಿಯಾದರೆ ಮುಂದೆ ಅಧಿಕೃತವಾಗಿ ಮಕ್ಕಳಿಗೆ ಲಸಿಕೆ ನೀಡಲು ಅನುಮೋದನೆ ಸಿಗಲಿದೆ. ಹೀಗಾದಲ್ಲಿ 18 ವರ್ಷದೊಳಗಿನವರಿಗೂ ಸೆಪ್ಟೆಂಬರ್ ನಿಂದ ಲಸಿಕೆ ಸಿಗುವ ನಿರಿಕ್ಷೆಯಿದೆ. ಎರಡನೇ ಹಂತದ ಲಸಿಕೆ ಪ್ರಯೋಗವಾದ ಬಳಿಕ ಮಧ್ಯಂತರ ವರದಿ ನೀಡಲಾಗುತ್ತದೆ. ಇದನ್ನು ನೋಡಿಕೊಂಡು ಮುಂದಿನ ನಿರ್ಧಾರಕ್ಕೆ ಬರಬಹುದು.