Publish Date: Sun, 23 Jan 2022 (17:20 IST)
Updated Date: Sun, 23 Jan 2022 (19:22 IST)
ನವದೆಹಲಿ : ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ಕೊರೊನಾ ಪಾಸಿಟಿವ್ ವರದಿಯಾಗಿದೆ.
ಈ ಬಗ್ಗೆ ಟ್ವಿಟ್ಟರ್ ಮೂಲಕ ತಿಳಿಸಿದ ಅವರು, ನಾನು ಹೈದಾರಾಬಾದ್ನಲ್ಲಿದ್ದು, ಇಂದು ನನಗೆ ಕೊರೊನಾ ಪಾಸಿಟಿವ್ ವರದಿಯಾಗಿದೆ. ಇನ್ನೂ ಒಂದು ವಾರ ಐಸೋಲೇಷನ್ ಆಗಿರಲು ನಿರ್ಧರಿಸಿದ್ದೇನೆ.
ನನ್ನ ಸಂಪರ್ಕದಲ್ಲಿ ಇದ್ದವರು ಐಸೋಲೇಷನ್ಗೆ ಒಳಗಾಗಿ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ. ಕೊರೊನಾ ಮೊದಲ ಅಲೆ ವೇಳೆ 29 ಸೆಪ್ಟೆಂಬರ್ 2020 ರಲ್ಲೂ ಕೂಡ ವೆಂಕಯ್ಯ ನಾಯ್ಡುರಿಗೆ ಕೊರೊನಾ ಸೋಂಕು ತಗುಲಿತ್ತು.