Publish Date: Tue, 02 Jun 2020 (09:45 IST)
Updated Date: Tue, 02 Jun 2020 (09:46 IST)
ನವದೆಹಲಿ : ಕೊರೊನಾ ರಣಕೇಕೆಗೆ ರಾಷ್ಟ್ರ ರಾಜಧಾನಿ ದೆಹಲಿ ನಲುಗಿಹೋಗಿದ್ದು, ದಿಲ್ಲಿಯಲ್ಲಿ ಶವಸಂಸ್ಕಾರಕ್ಕೆ ಜಾಗ ಹುಡುಕಾಟ ನಡೆಸುತ್ತಿದ್ದಾರೆ.
ದೆಹಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 20 ಸಾವಿರ ದಾಟಿದ್ದು, ನಿನ್ನೆ ಒಂದೇ ದಿನ 50 ಜನ ಕೊರೊನಾಗೆ ಬಲಿಯಾಗಿದ್ದಾರೆ. ಆದಕಾರಣ ಅಂತ್ಯ ಸಂಸ್ಕಾರಕ್ಕೂ ಜಾಗ ಹುಡುಕಿ ಸಿದ್ಧತೆ ಮಾಡಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ದೆಹಲಿ ಸರ್ಕಾರ ಪತ್ರ ಬರೆದಿದ್ದಾರೆ. ಹಾಗೇ ರೋಗಿಗಳಿಗೆ ಬೆಡ್ ಹಾಕಿ ಚಿಕಿತ್ಸೆಗೆ ಮೀಸಲಿಡಿ ಎಂದು ಜಿಲ್ಲಾಧಿಕಾರಿಗೆ ಸಿಎಂ ಅರವಿಂದ್ ಕ್ರೇಜಿವಾಲ್ ಸೂಚಿಸಿದ್ದಾರೆ.