Select Your Language

Notifications

webdunia
webdunia
webdunia
webdunia

ಆಪ್ ಪ್ರಣಾಳಿಕೆ ಬಳಸಿಕೊಂಡು ಕಾಂಗ್ರೆಸ್ ಕರ್ನಾಟಕದಲ್ಲಿ ಗೆದ್ದಿದೆ : ಕೇಜ್ರಿವಾಲ್

ಆಪ್ ಪ್ರಣಾಳಿಕೆ ಬಳಸಿಕೊಂಡು ಕಾಂಗ್ರೆಸ್ ಕರ್ನಾಟಕದಲ್ಲಿ ಗೆದ್ದಿದೆ : ಕೇಜ್ರಿವಾಲ್
ನವದೆಹಲಿ , ಮಂಗಳವಾರ, 23 ಮೇ 2023 (10:03 IST)
ನವದೆಹಲಿ : ಎಎಪಿ ಪ್ರಣಾಳಿಕೆ ಬಳಸಿಕೊಂಡು ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಸಭೆಯೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ ವಿಚಾರವನ್ನು ಪ್ರಸ್ತಾಪಿಸಿದರು. ಆಪ್ ಪ್ರಣಾಳಿಕೆಯಲ್ಲಿ ನಾವು ಬಳಸಿದ್ದ ಅಂಶಗಳನ್ನು ಅವರು ಬಳಸಿಕೊಂಡಿದ್ದಾರೆ. ಈ ಮೂಲಕ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿದೆ ಎಂದಿದ್ದಾರೆ.

ನಾವು ಉಚಿತ ವಿದ್ಯುತ್, ಪಡಿತರ, ಮಹಿಳೆಯರಿಗೆ ಹಾಗೂ ಯುವಕರಿಗೆ ಮಾಸಿಕ ಭತ್ಯೆ ನೀಡುತ್ತೇವೆ ಎಂದು ಹೇಳಿದ್ದೆವು. ಇದನ್ನೇ ಕಾಂಗ್ರೆಸ್ ಪಕ್ಷದವರು ಬಳಸಿಕೊಂಡು ಚುನಾವಣೆಯಲ್ಲಿ ಗೆದ್ದಿದ್ದಾರೆ ಎಂದು ಟೀಕಿಸಿದರು. 

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನಿಂದಲೇ 2 ಸಾವಿರ ರೂ.ನೋಟ್ ಹಿಂತೆಗೆತ