Select Your Language

Notifications

webdunia
webdunia
webdunia
webdunia

ಸಿನಿಮಾ ಮಂದಿರ, ಮಲ್ಟಿಪ್ಲೆಕ್ಸ್, ಈಜುಕೊಳ ತೆರೆಯಲು ಕಾಂಗ್ರೆಸ್ ಒತ್ತಾಯ

ಸಿನಿಮಾ ಮಂದಿರ, ಮಲ್ಟಿಪ್ಲೆಕ್ಸ್, ಈಜುಕೊಳ ತೆರೆಯಲು ಕಾಂಗ್ರೆಸ್ ಒತ್ತಾಯ
ಮುಂಬೈ , ಗುರುವಾರ, 9 ಸೆಪ್ಟಂಬರ್ 2021 (13:25 IST)
ಮುಂಬೈ : ತೀವ್ರವಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಸಿನಿಮಾ ಮಂದಿರಗಳು, ಮಲ್ಟಿಪ್ಲೆಕ್ಸ್ಗಳು, ಆಡಿಟೋರಿಯಂಗಳ ಪುನರಾರಂಭಕ್ಕೆ ಅವಕಾಶ ನೀಡಬೇಕು ಎಂದು ಕಾಂಗ್ರೆಸ್ನ ಮುಂಬೈ ಘಟಕ ಮಹಾರಾಷ್ಟ್ರ ಸರ್ಕಾರವನ್ನು ಒತ್ತಾಯಿಸಿದೆ.

ಇದೇ ವೇಳೆ, ಈಜುಕೊಳಗಳನ್ನು ತೆರೆಯುವ ಮೂಲಕ, ಪಂದ್ಯಗಳಲ್ಲಿ ಪಾಲ್ಗೊಳ್ಳುವ ವೃತ್ತಿಪರ ಈಜು ಪಟುಗಳಿಗೆ ಅಭ್ಯಾಸ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಘಟಕದ ಮುಖ್ಯಸ್ಥರು ಆಗ್ರಹಿಸಿದ್ದಾರೆ.
ಬುಧವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಂಬೈನ ಕಾಂಗ್ರೆಸ್ ಘಟಕದ ಮುಖ್ಯಸ್ಥ ಭಾಯ್ ಜಗತಾಪ್, 'ಸುಮಾರು ಹದಿನೆಂಟು ತಿಂಗಳಿನಿಂದ ಈಜುಕೊಳಗಳನ್ನು ಮುಚ್ಚಲಾಗಿದೆ. ಮುಂಬರುವ ದಿನಗಳಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಈಜು ಪಂದ್ಯಗಳು ನಡೆಯುತ್ತಿದ್ದು, ಅದರಲ್ಲಿ ಭಾಗಹಿಸುವ ವೃತ್ತಿಪರ ಈಜುಪಟುಗಳಿಗೆ ಅಭ್ಯಾಸ ಮಾಡುವುದಕ್ಕಾಗಿ ಕೋವಿಡ್ ಮಾರ್ಗಸೂಚಿಗೊಳೊಂದಿಗೆ ಈಜುಕೊಳಗಳನ್ನು ಪುನರಾರರಂಭಿಸಲು ಅನುಮತಿ ನೀಡಬೇಕು' ಎಂದು ಒತ್ತಾಯಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯರೂ ಆಗಿರುವ ಜಗತಾಪ್ ಅವರು, 'ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಸಿನಿಮಾ ಮಂದಿರಗಳು ಮುಚ್ಚಿವೆ. ಇಲ್ಲಿವರೆಗೂ ಸುಮಾರು ₹400 ಕೋಟಿಯಷ್ಟು ನಷ್ಟ ಅನುಭವಿಸಿವೆ. ಸಾಮಾನ್ಯ ದಿನಗಳಲ್ಲಿ ಮುಂಬೈನಲ್ಲಿ ಸಿನಿಮಾ ಮಂದಿರಗಳ ಸುತ್ತಾ ಪ್ರಮುಖ ವಾಣಿಜ್ಯ ಚಟುವಟಿಕೆಗಳು ನಡೆಯುತ್ತಿದ್ದವು. ವರ್ಷದಿಂದೀಚೆಗೆ ಅವೆಲ್ಲ ಬಂದ್ ಆಗಿವೆ' ಎಂದು ಹೇಳಿದರು.
'ನಿಯಮ, ನಿರ್ಬಂಧಗಳನ್ನು ಉಲ್ಲಂಘಿಸಿ ಅನುಮತಿ ನೀಡಬೇಕೆಂದು ಸರ್ಕಾರವನ್ನು ಕೇಳುತ್ತಿಲ್ಲ. ಈಗಿರುವ ಸಮಸ್ಯೆಗೆ ಯಾವುದಾದರೂ ಸೂಕ್ತ ಪರಿಹಾರವೊಂದನ್ನು ಸೂಚಿಸಬೇಕೆಂದು ಕೇಳುತ್ತಿದ್ದೇವೆ. ಈ ಆರ್ಥಿಕ ಚಟುವಟಿಕೆಗಳ ಮೇಲೆ ನೂರಾರು ಮಂದಿ ಅವಲಂಬಿತರಾಗಿದ್ದಾರೆ. ಇವುಗಳು ಸ್ಥಗಿತಗೊಂಡಿರುವುದರಿಂದ ಬಹಳಷ್ಟು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ' ಎಂದು ಅವರು ವಿವರಿಸಿದರು.
ಕೋವಿಡ್ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವುದರೊಂದಿಗೆ ಸಿನಿಮಾ ಮಂದಿರಗಳು, ಮಲ್ಟಿಪ್ಲೆಕ್ಸ್ಗಳು ಮತ್ತು ಕ್ರೀಡಾಂಗಣಗಳನ್ನು ತೆರೆಯಲು ಅನುಮತಿ ನೀಡಬೇಕು ಎಂದು ಅವರು ಒತ್ತಾಯಿಸಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಬೆಳಗಾವಿ ಸಮೀಪ ಅಪಘಾತ: ಇಬ್ಬರು ಕಾಲೇಜು ವಿದ್ಯಾರ್ಥಿಗಳು ಸಾವು