Select Your Language

Notifications

webdunia
webdunia
webdunia
webdunia

ಹೃದಯಾಘಾತದಿಂದ ನಿಧನರಾದ ಕಾಂಗ್ರೆಸ್ ಸಂಸದ ಪ್ರವೀಣ್ ರಾಷ್ಟ್ರಪಾಲ್

ಹೃದಯಾಘಾತದಿಂದ ನಿಧನರಾದ ಕಾಂಗ್ರೆಸ್ ಸಂಸದ ಪ್ರವೀಣ್ ರಾಷ್ಟ್ರಪಾಲ್
ನವದೆಹಲಿ , ಗುರುವಾರ, 12 ಮೇ 2016 (15:39 IST)
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ರಾಜ್ಯಸಭಾ ಸದಸ್ಯ ಪ್ರವೀಣ್ ರಾಷ್ಟ್ರಪಾಲ್ (76) ಹೃದಯಾಘಾತದಿಂದ ಗುರುವಾರ ನಿಧನರಾಗಿದ್ದಾರೆ. ರಾಷ್ಟ್ರಪಾಲ್ ಮೂವರು ಪುತ್ರಿಯರು ಮತ್ತು ಒಬ್ಬ ಪುತ್ರನನ್ನು ಅಗಲಿದ್ದಾರೆ.

ಆದಾಯ ತೆರಿಗೆ ನೌಕರರ ಟ್ರೇಡ್ ಯೂನಿಯನ್ ಚಳುವಳಿಯಲ್ಲಿ ಅವರು ಗುರುತಿಸಿಕೊಂಡಿದ್ದರು. ರಾಜಕೀಯಕ್ಕೆ ಇಳಿಯುವ ಮುನ್ನ ಆದಾಯ ತೆರಿಗೆ ಇಲಾಖೆಯಲ್ಲಿ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು.
 
13ನೇ ಲೋಕಸಭೆ(1999-2004)ಗೆ ಆಯ್ಕೆಯಾಗಿದ್ದ ರಾಷ್ಟ್ರಪಾಲ್ 2006ರಿಂದ 2012ರವರೆಗೆ ಮೇಲ್ಮನೆ ಸದಸ್ಯರಾಗಿದ್ದರು. ಎಪ್ರಿಲ್ 2012ರಲ್ಲಿ ಅವರು ಪುನರಾಯ್ಕೆಯಾಗಿದ್ದರು. 
 
ರಾಷ್ಟ್ರಪಾಲ್ ಅವರ ನಿಧನಕ್ಕೆ ಸಂತಾಪ ವ್ಯಕ್ತ ಪಡಿಸಿ ರಾಜ್ಯ ಸಭೆ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.

Share this Story:

Follow Webdunia kannada

ಮುಂದಿನ ಸುದ್ದಿ

ಉತ್ತರಾಖಂಡ: ಬಂಡಾಯ ಕಾಂಗ್ರೆಸ್ ಶಾಸಕರು ಬಿಜೆಪಿ ಸೇರುವ ಸಾಧ್ಯತೆ