ನೋಟು ನಿಷೇಧವನ್ನು ಸಮರ್ಥಿಸಿಕೊಂಡಿರುವ ಪ್ರಧಾನಿ ಮೋದಿ ಇದು ಕಪ್ಪು ಹಣದ ವಿರುದ್ಧದ ಯುದ್ಧ ಎಂದಿದ್ದು, ಈ ನಡೆಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಮತ್ತು ಎಡ ಪಕ್ಷಗಳ ಮೇಲೆ ಕಿರಿಕಾರಿದ್ದಾರೆ.
ಬಿಜೆಪಿ ಮತ್ತು ಎನ್‌ಡಿಎಗೆ ದೇಶ ಪಕ್ಷಕ್ಕಿಂತ ದೊಡ್ಡದು. ಆದರೆ ಕಾಂಗ್ರೆಸ್ ಪಕ್ಷಕ್ಕೆ ದೇಶಕ್ಕಿಂತ ಪಕ್ಷ ದೊಡ್ಡದು ಎಂದಿದ್ದಾರೆ ಪ್ರಧಾನಿ.
ಬಿಜೆಪಿ ಸಂಸದರಿಗೆ ನಗದು ರಹಿತ ವ್ಯವಹಾರಕ್ಕೆ ಮಹತ್ವ ಕೊಡಿ ಎಂದ ಪ್ರಧಾನಿ 2012ರಲ್ಲಿ ಸರ್ವೋಚ್ಚ ನ್ಯಾಯಾಲಯ ಯುಪಿಎ ಸರ್ಕಾರಕ್ಕೆ ಕಪ್ಪುಹಣದ ಮೇಲೆ ವಿಶೇಷ ತನಿಖಾ ತಂಡವನ್ನು ರಚಿಸಲು ಆದೇಶಿಸಿತ್ತು. ಆದರೆ ಮುಂದಿನ 3 ವರ್ಷಗಳಲ್ಲಿ ಅವರೇನನ್ನು ಮಾಡಲಿಲ್ಲ, ಎಂದು ಹೇಳಿದ್ದಾಗಿ ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್ ತಿಳಿಸಿದ್ದಾರೆ.
"ಅವರೇನನ್ನು ಮಾಡಲಿಲ್ಲ. ಆದರೆ ನಾವು ಅಧಿಕಾರಕ್ಕೆ ಬರುತ್ತಿದ್ದಂತೆ ಮೊದಲು ಎಸ್‌ಐಟಿಯನ್ನು ರಚಿಸಿದೆವು, ಎಂದು ಮೋದಿ ಅವು ಸಂಸದೀಯ ಪಕ್ಷದ ಸಭೆಯಲ್ಲಿ ಹೇಳಿದ್ದಾಗಿ ಅನಂತ್ ಕುಮಾರ್ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ