ನಗದು ರಹಿತ ವ್ಯವಹಾರಕ್ಕೆ ಪ್ರೋತ್ಸಾಹ ನೀಡಲು ಕೇಂದ್ರ ಸರ್ಕಾರ ಗ್ರಾಹಕರಿಗೆ ಮತ್ತು ವ್ಯಾಪಾರಿಗಳಿಗೆ ದೈನಂದಿನ, ವಾರದ ಮತ್ತು ಮೆಗಾ ಬಹುಮಾನವನ್ನು ಘೋಷಿಸಿದೆ. ಕ್ರಿಸ್ಮಸ್ ಹಬ್ಬದಿಂದ ಈ ಆಫರ್ ಆರಂಭಗೊಳ್ಳಲಿದೆ.
ಕ್ರಿಸ್ಮಸ್ ಹಬ್ಬದ ಉಡುಗೊರೆಯಾಗಿ ಲಕ್ಕಿ ಗ್ರಾಹಕ ಯೋಜನೆ ಮತ್ತು ದಿಗಿ- ಧನ್ ವ್ಯಾಪಾರ ಯೋಜನೆಯನ್ನು ಘೋಷಿಸಿ ಮಾತನಾಡಿದ ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್, ಬಡ, ಕೆಳ ಮಧ್ಯಮ ವರ್ಗ ಮತ್ತು ಸಣ್ಣ ಪ್ರಮಾಣದ ಉದ್ಯಮಗಳನ್ನು ಡಿಜಿಟಲ್ ವ್ಯವಹಾರದ ಕೆಳಗೆ ಸೆಳೆಯುವುದು ಇದರ ಉದ್ದೇಶ ಎಂದಿದ್ದಾರೆ.
ಸಮಾಜದ ಪ್ರತಿಯೊಂದು ವಿಭಾಗದಲ್ಲಿ ಡಿಜಿಟಲ್ ವ್ಯವಹಾರವನ್ನು ಉತ್ತೇಜಿಸಲು 50 ರಿಂದ 3,000 ದಂತಹ ಸಣ್ಣ ಪ್ರಮಾಣದ ವ್ಯವಹಾರಗಳನ್ನು ನಡೆಸುವವರಿಗೆ ಈ ಆಫರ್‌ನ್ನು ನೀಡಲಾಗಿದೆ. ಈ ಯೋಜನೆಗಳ ಮೇಲ್ವಿಚಾರಣೆ ನ್ಯಾಶನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾದ್ದು.
ಇದರ ಅವಧಿ ಡಿಸೆಂಬರ್ 25 ರಿಂದ ಎಪ್ರಿಲ್ 13. ಯೋಜನೆಗಳಿಗಾಗಿ ರಾಷ್ಟ್ರೀಯ ಆರ್ಥಿಕ ನಿಧಿಯಿಂದ ರೂ.125 ಕೋಟಿ ಮೀಸಲಿಡಬೇಕೆಂದು ನಿರ್ಣಯಿಸಲಾಗಿದೆ. ಎಸ್‍ಬಿಐ, ಪಂಜಾಬ್ ನ್ಯಾಶನಲ್ ಬ್ಯಾಂಕ್, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಇಂಡಿಯಾ, ಐಸಿಐಸಿಐ ಬ್ಯಾಂಕ್, ಹೆಚ್‌ಡಿಎಫ್‍ಸಿ ಬ್ಯಾಂಕ್, ಸಿಟಿ ಬ್ಯಾಂಕ್, ಎಚ್‍ಎಚ್‍ಬಿಸಿ ಬ್ಯಾಂಕುಗಳು ಪ್ರೊಮೋಟರ್‌ಗಳಾಗಿ ಕೆಲಸ ಮಾಡುತ್ತಿವೆ.
ಮುಖ್ಯವಾಗಿ ಹಳ್ಳಿಗಳು, ಸಣ್ಣ ಪಟ್ಟಣಗಳಲ್ಲಿ ವಾಸಿಸುವವರನ್ನು ಡಿಜಿಟಲ್ ವ್ಯವಹಾರದ ಕಡೆಗೆ ಸೆಳೆಯಲು ಪ್ರಧಾನ ಗುರಿಯಾಗಿಸಿಕೊಂಡು ಈ ಯೋಜನೆ ರೂಪಿಸಲಾಗಲಿದೆ. ಡಿಜಿಟಲ್ ವ್ಯವಹಾರದ ಐಡಿಗಳನ್ನು ಮೂರು ತಿಂಗಳಿಗೊಮ್ಮೆ ಲಕ್ಕಿ ಡ್ರಾ ಮಾಡಲಾಗುತ್ತದೆ.
ಒಬ್ಬರಿಗೆ ಬಂಪರ್ ಬಹುಮಾನವಾಗಿ ರೂ.1 ಕೋಟಿ ಕೊಡಲು ನಿರ್ಧರಿಸಲಾಗಿದೆ. ಅದೇ ರೀತಿ ವಾರಕ್ಕೆ ಒಮ್ಮೆ ಲಕ್ಕಿ ಡ್ರಾ ಮೂಲಕ 10 ಮಂದಿ ಗ್ರಾಹಕರು, 10 ಮಂದಿ ವ್ಯಾಪಾರಿಗಳನ್ನು ಆಯ್ಕೆ ಮಾಡಿ ತಲಾ ರೂ 10 ಲಕ್ಷ ಬಹುಮಾನ ಕೊಡಲಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ