Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಗೆದ್ದರಿ ಇವಿಎಂ ಕ್ಯಾನ್ಸಲ್, ಮತಪತ್ರ ಬಳಕೆ ಕಾಂಗ್ರೆಸ್‌ ಭರವಸೆ!

ಕಾಂಗ್ರೆಸ್ ಗೆದ್ದರಿ ಇವಿಎಂ ಕ್ಯಾನ್ಸಲ್, ಮತಪತ್ರ ಬಳಕೆ ಕಾಂಗ್ರೆಸ್‌ ಭರವಸೆ!
ಉದಯಪುರ , ಸೋಮವಾರ, 16 ಮೇ 2022 (08:34 IST)
ಉದಯಪುರ: ‘ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಕಾರ್ಯನಿರ್ವಹಣೆ ಬಗ್ಗೆ ಕಾಂಗ್ರೆಸ್‌ ಪಕ್ಷಕ್ಕೆ ಸಂದೇಹವಿದೆ. ಹೀಗಾಗಿ 2024ರ ಚುನಾವಣೆ ಪ್ರಣಾಳಿಕೆಯಲ್ಲಿ ಈ ಹಿಂದಿನ ಮತಪತ್ರ ಪದ್ಧತಿ ಜಾರಿಗೆ ತರುವ ಭರವಸೆಯನ್ನು ಮುಂದಿನ ಚುನಾವಣೆಯಲ್ಲಿ ನೀಡುವ ಸಂಬಂಧ ಪಕ್ಷ ನಿರ್ಣಯ ಕೈಗೊಳ್ಳಲಿದೆ’ ಎಂದು ಹಿರಿಯ ಕಾಂಗ್ರೆಸ್‌ ನಾಯಕ ಪೃಥ್ವೀರಾಜ್‌ ಚವಾಣ್‌ ಹೇಳಿದ್ದಾರೆ.
 
ಕಾಂಗ್ರೆಸ್‌ ಚಿಂತನ ಶಿಬಿರದ ವೇಳೆ ರಾಜಕೀಯ ವ್ಯವಹಾರದ ಸಮಿತಿ ಸಭೆಯಲ್ಲಿ ಇವಿಎಂ ಬಗ್ಗೆ ವಿಷಯ ಪ್ರಸ್ತಾಪಿಸಿದ ಚವಾಣ್‌, ‘ಇವಿಎಂ ಬಳಸಿ ನಡೆದಿರುವ ವಂಚನೆಯ ಬಗ್ಗೆ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು. ಇವಿಎಂ ಬೇಡ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದರೆ ಫಲವಿಲ್ಲ. ಮಾಡುವುದೂ ಇಲ್ಲ. ಇದರ ಬದಲು 2024ರ ಚುನಾವಣೆಯಲ್ಲಿ ‘ಇವಿಎಂ ಬದಲಿಸಿ ಮತಪತ್ರ ಪದ್ಧತಿ ತರಯತ್ತೇವೆ’ ಎಂಬ ಅಂಶವನ್ನು ನಾವು ಪ್ರಣಾಳಿಕೆಯಲ್ಲಿ ಸೇರಿಸುವುದು ಒಂದೇ ಮಾರ್ಗ’ ಎಂದರು.
 
ಸತತವಾಗಿ ಇತ್ತೀಚಿನ ಚುನಾವಣೆಗಳಲ್ಲಿ ಸೋತು ಸುಣ್ಣವಾಗಿರುವ ಪಕ್ಷವನ್ನು ಪುನಶ್ಚೇತನಗೊಳಿಸಲು ಕಾಂಗ್ರೆಸ್‌ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಂಡಿದೆ. ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ, ಕೆಲವು ವಿನಾಯಿತಿಗಳನ್ನು ಹೊರತುಪಡಿಸಿ ಒಂದು ಕುಟುಂಬಕ್ಕೆ ಒಂದೇ ಟಿಕೆಟ್‌, ಪಕ್ಷದ ಸಂಘಟನೆಯಲ್ಲಿ ಅಹಿಂದ ವರ್ಗಕ್ಕೆ ಶೇ.50ರಷ್ಟುಆದ್ಯತೆ, 50 ವರ್ಷ ಕೆಳಗಿನವರಿಗೆ ಪಕ್ಷದ ಶೇ.50ರಷ್ಟುಹುದ್ದೆ, ಪಕ್ಷದ ಎಲ್ಲಾ ಜನಪ್ರತಿನಿಧಿಗಳಿಗೆ ನಿವೃತ್ತಿ ವಯೋಮಿತಿ ನಿಗದಿ- ಇತ್ಯಾದಿ ಮಹತ್ವದ ನಿರ್ಣಯಗಳನ್ನು ಅಂಗೀಕರಿಸಲಾಗಿದೆ.
 
3 ದಿನಗಳ ನವಸಂಕಲ್ಪ ಚಿಂತನ ಶಿಬಿರ ರಾಜಸ್ಥಾನದ ಉದಯಪುರದಲ್ಲಿ ಭಾನುವಾರ ಸಂಜೆ ಅಂತ್ಯಗೊಂಡಿತು. ಈ ವೇಳೆ ಪಕ್ಷಕ್ಕೆ ಮರುಜೀವ ನೀಡುವ ನಿಟ್ಟಿನಲ್ಲಿ ಹಲವಾರು ಮಹತ್ವದ ನಿರ್ಣಯಗಳನ್ನು ಪಕ್ಷಾಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದ ಸಭೆ ಕೈಗೊಂಡಿತು.
 
ಆಂತರಿಕ ನೋಟ, ಚುನಾವಣಾ ನಿರ್ವಹಣೆ, ತರಬೇತಿ ಎಂಬ ಮೂರು ಹೊಸ ವಿಭಾಗ ತೆರೆಯಲು ನಿರ್ಧರಿಸಲಾಗಿದೆ. ಜತೆಗೆ ರಾಜಕೀಯ ಸವಾಲು ಎದುರಿಸುವ ಸಲಹೆ ನೀಡಲು ಸಿಡಬ್ಲ್ಯುಸಿಯಲ್ಲಿ ಆಯ್ದ ಸದಸ್ಯರ ಸಲಹಾ ಸಮಿತಿ ಹಾಗೂ ಸಂಘಟನಾತ್ಮಕ ಸುಧಾರಣೆಗೆ ಟಾಸ್‌್ಕ ಫೋರ್ಸ್‌ ರಚಿಸಲಾಗುತ್ತದೆ.
 
ಪಕ್ಷದಲ್ಲಿ ವಂಶಪಾರಂಪರ‍್ಯ ರಾಜಕೀಯ ನಡೆಯುತ್ತಿದೆ ಎಂಬ ಆರೋಪಕ್ಕೆ ಅಂತ್ಯ ಹಾಡಲು, ಒಂದು ಕುಟುಂಬಕ್ಕೆ ಒಂದೇ ಟಿಕೆಟ್‌ ನಿರ್ಣಯ ತೆಗೆದುಕೊಳ್ಳಲಾಗಿದೆ. ಆದರೆ ಅದೇ ಕುಟುಂಬದ ಇನ್ನೊಬ್ಬ ವ್ಯಕ್ತಿ ಪಕ್ಷಕ್ಕಾಗಿ 5 ವರ್ಷದ ದುಡಿದಿದ್ದಲ್ಲಿ ಆತನನ್ನು ಟಿಕೆಟ್‌ಗೆ ಪರಿಗಣಿಸಲಾಗುತ್ತದೆ. ಒಬ್ಬ ವ್ಯಕ್ತಿ ಒಂದೇ ಹುದ್ದೆ ಹೊಂದಬೇಕು. ಎರಡೆರಡು ಮಹತ್ವದ ಪದವಿ ಹೊಂದುವಂತಿಲ್ಲ ಎಂಬ ನಿರ್ಣಯ ಅಂಗೀಕರಿಸಲಾಗಿದೆ.
 
ಮೂರು ದಿನಗಳ ಕಾಂಗ್ರೆಸ್‌ ಚಿಂತನ ಶಿಬಿರದ ಆರಂಭದ ದಿವಸವೇ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀಕ್ಷ$್ಣ ವಾಗ್ದಾಳಿ ನಡೆಸಿದ್ದಾರೆ. ‘ದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ಕ್ರೂರತೆ ಮೆರೆಯಲಾಗುತ್ತಿದೆ. ರಾಜಕೀಯ ವಿರೋಧಿಗಳನ್ನು ಮಟ್ಟಹಾಕಲಾಗುತ್ತಿದೆ’ ಎಂದು ಕಿಡಿಕಾರಿದ್ದಾರೆ. ಇದೇ ವೇಳೆ, ‘ಪಕ್ಷ ಸಂಘಟನೆಯಲ್ಲಿ ಬದಲಾವಣೆ ತಂದು ಒಗ್ಗಟ್ಟಿನ ಮಂತ್ರವನ್ನು ಕಾಂಗ್ರೆಸ್ಸಿಗರು ಪಠಿಸಬೇಕು. ಪಕ್ಷ ಬಲಪಡಿಸಬೇಕು’ ಎಂದೂ ಕರೆ ನೀಡಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಸಿಮೆಂಟ್ ಉತ್ಪಾದನಾ ವಲಯಕ್ಕೆ ಅದಾನಿ ಎಂಟ್ರಿ