Webdunia - Bharat's app for daily news and videos

Install App

ಜಿಎಸ್‌ಟಿ ವಿರೋಧಿಸಿಲ್ಲ, ಕೆಲವು ಕಳವಳಗಳಿವೆ: ಸುರ್ಜೇವಾಲಾ

Webdunia
ಗುರುವಾರ, 7 ಜುಲೈ 2016 (19:00 IST)
ಕೇಂದ್ರ ಸರ್ಕಾರ ಜಿಎಸ್‌ಟಿ ಮಸೂದೆ ಅಂಗೀಕಾರಕ್ಕಾಗಿ ಸರ್ವ ಪ್ರಯತ್ನಗಳನ್ನು ನಡೆಸುತ್ತಿರುವುದರ ಮಧ್ಯೆ ಕಾಂಗ್ರೆಸ್ ನಾವು ಜಿಎಸ್‌ಟಿಯನ್ನು ವಿರೋಧಿಸುತ್ತಿಲ್ಲ, ಆದರೆ ಕೆಲವು ಕಳವಳಗಳಿವೆ ಎಂದಿದೆ. 

ನಾವು ಜಿಎಸ್‌ಟಿಯನ್ನು ವಿರೋಧಿಸುತ್ತಿಲ್ಲ. ಅದನ್ನು ಪರಿಚಯಿಸಿದ್ದು ನಾವೇ.  ಸಾಮಾನ್ಯ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು  ಕಾಂಗ್ರೆಸ್ ನಾಯಕತ್ವ ಮೂರು ಬಹುಮುಖ್ಯ ಸಲಹೆಗಳನ್ನು ಮುಂದಿಟ್ಟಿದೆ ಎಂದು ಕೈ ವಕ್ತಾರ ರಣ್ದೀಪ್ ಸುರ್ಜೇವಾಲಾ ತಿಳಿಸಿದ್ದಾರೆ. 
 
ಪ್ರಧಾನಿ ಮೋದಿ ಮತ್ತು ಎನ್‌ಡಿಎ ಸರ್ಕಾರದ ವಿರುದ್ಧ ಕಿಡಿಕಾರಿದ ಅವರು ನಾವು ಅಧಿಕಾರದಲ್ಲಿದ್ದಾಗ ಜಿಎಸ್‌ಟಿ ಮಸೂದೆಯನ್ನು ಜಾರಿಗೆ ತರ ಹೊರಟಾಗ ಈಗಿನ ಪ್ರಧಾನಿ, ವಿತ್ತ ಸಚಿವರು ಸೇರಿದಂತೆ ಸಂಪೂರ್ಣ ಬಿಜೆಪಿ ಇದನ್ನು ವಿರೋಧಿಸಿತ್ತು ಎಂದಿದ್ದಾರೆ. 
 
ಈ ದೇಶದಲ್ಲಿ ಒಬ್ಬ ವ್ಯಕ್ತಿ  30 ರಷ್ಟು ಆದಾಯ ತೆರಿಗೆ, ಶೇ 15ರಷ್ಟು ಸೇವಾ ತೆರಿಗೆಯನ್ನು ಪಾವತಿಸುತ್ತಾನೆ. ಆದರೆ ಕಾಂಗ್ರೆಸ್ ತೆರಿಗೆಗೆ ಸಾಂವಿಧಾನಿಕ ಮಿತಿಯನ್ನು ಅಳವಡಿಸಲು ಬಯಸುತ್ತದೆ. ಈ ಮೂಲಕ ಸಾಮಾನ್ಯ ಜನರ ಮೇಲೆ ಯಾರು ಕೂಡ ಹೆಚ್ಚಿನ ತೆರಿಗೆಯನ್ನು ವಿಧಿಸದಂತಾಗಬೇಕು ಎಂಬುದು ನಮ್ಮ  ಪ್ರಥಮ ಸಲಹೆ. ದೆಹಲಿ ಸಿಎಂ ಮನೋರಂಜನಾ ತೆರಿಗೆಯನ್ನು 40% ಹೇರುತ್ತಾರೆ. ಆದರೆ ನಮ್ಮ ಪ್ರಕಾರ ತೆರಿಗೆ 18% ಕ್ಕಿಂತ ಹೆಚ್ಚಿರಬಾರದು ಎಂದು ಸುರ್ಜೇವಾಲಾ ತಿಳಿಸಿದ್ದಾರೆ.
 
ಉತ್ಪಾದಕ ರಾಜ್ಯಗಳು ಒಂದು ಪ್ರತಿಶತ ಹೆಚ್ಚು ತೆರಿಗೆಯನ್ನು ವಿಧಿಸುತ್ತವೆ. ಆದರೆ ಜಿಎಸ್‌ಟಿ ಅಂದರೆ ಸಂಪೂರ್ಣ ದೇಶಾದ್ಯಂತ ಒಂದೇ ರೀತಿಯ ತೆರಿಗೆಯನ್ನು ವಿಧಿಸುವುದು. ಇದು ನಮ್ಮ ಮೂರನೆಯ ಸಲಹೆ ಎಂದು ಅವರು ಹೇಳಿದ್ದಾರೆ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ಎರಡು ದಿನಗಳಿಗೆ ಹವಾಮಾನದಲ್ಲಿ ಆಗಲಿದೆ ಮಹತ್ವದ ಬದಲಾವಣೆ

ಇಸ್ರೇಲ್ ದಾಳಿಗೆ ಗಟ್ಟಿಯಾಗಿ ನಿಲ್ಲುವಂತೆ ಇರಾನ್ ನಾಯಕ ಖಮೇನಿ ಜನತೆಗೆ ಸಂದೇಶ

ಇರಾನ್ ಬೆನ್ನಲ್ಲೇ ಇಸ್ರೇಲ್‌ನಿಂದ ಭಾರತೀಯರನ್ನು ಕರೆತರಲು ಮುಂದಾದ ಕೇಂದ್ರ ಸರ್ಕಾರ

ರಾಹುಲ್ ಗಾಂಧಿ ಜನ್ಮದಿನಕ್ಕೆ ಡಿಕೆಶಿಯಿಂದ ಕಣ್ಣುಗಳೇ ಗಿಫ್ಟ್

Sonia Gandhi: ಹಿರಿಯ ನಾಯಕಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌

ಮುಂದಿನ ಸುದ್ದಿ
Show comments