Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಹೊಸ ಮಂತ್ರ: ಔಟ್ ಸೈಡರ್ ಮೋದಿ v/s ಲೋಕಲ್ ಬಾಯ್ಸ್

Congress
ಲಖನೌ , ಬುಧವಾರ, 25 ಜನವರಿ 2017 (11:00 IST)
ಸಮಾಜವಾದಿ ಪಕ್ಷದ ಜತೆ ಮೈತ್ರಿಯನ್ನು ಭದ್ರ ಮಾಡಿಕೊಂಡಿರುವ ಕಾಂಗ್ರೆಸ್ ಉತ್ತರ ಪ್ರದೇಶದಲ್ಲಿ ಬೆಳೆಯುತ್ತಿರುವ ಮೋದಿ ಪ್ರಭಾವವನ್ನು ಮಸುಕಾಗಿಸಲು ಹೊಸ ಘೋಷಣೆಯೊಂದನ್ನು ಚಲಾವಣೆಗೆ ತಂದಿದೆ.  
"ಅಪ್ನೆ ಲಡ್ಕೆ, ಬಾಹ್ರಿ ಮೋದಿ" (ನಮ್ಮ ಹುಡುಗರು, ಹೊರಗಿನ ಮೋದಿ), ಎಂಬ ಘೋಷಣೆಯನ್ನು ತಂದಿರುವ ಕಾಂಗ್ರೆಸ್ ಸಮಾಜವಾದಿ ನಾಯಕ, ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮತ್ತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನು ಸ್ಥಳೀಯ ಹುಡುಗರು ಎಂದು ಪ್ರಧಾನಿ ವಾರಣಾಸಿಯನ್ನು ಪ್ರತಿನಿಧಿಸುವ ಮೋದಿಯನ್ನು ಹೊರಗಿನವರೆಂಬಂತೆ ಬಿಂಬಿಸಿ ಮತಗಳನ್ನು ಸೆಳೆಯಲು ಪ್ರಯತ್ನಿಸುತ್ತಿದೆ. 
 
ಉತ್ತರಪ್ರದೇಶದ 18% ಮತದಾರರು ಮುಸ್ಲಿಂ ಮತೀಯರಾಗಿದ್ದು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳ ಸಾಂಪ್ರದಾಯಿಕ ಮತದಾರರಾಗಿದ್ದಾರೆ.
 
ರಾಹುಲ್ ಕಾಂಧಿ ಅಖಿಲೇಶ್ ಯಾದವ್ ಜತೆಗೂಡಿ ಪ್ರಚಾರ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಸೋನಿಯಾ ಗಾಂಧಿ ಪುತ್ರಿ ಪ್ರಿಯಾಕಾ ಗಾಂಧಿ ಅಖಿಲೇಶ್ ಪತ್ನಿ ಜತೆ ಸೇರಿ ಪ್ರಚಾರ ನಡೆಸುತ್ತಾರಾ ಎಂಬುದಿನ್ನು ಸ್ಪಷ್ಟವಾಗಿಲ್ಲ. 
 
2014ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಮೋದಿ ಅಲೆ ಭರ್ಜರಿಯಾಗಿಯೇ ಕೆಲಸ ಮಾಡಿತ್ತು. 80 ಸಂಸದೀಯ ಸ್ಥಾನಗಳಲ್ಲಿ 71ನ್ನು ಬಿಜೆಪಿ ಬಾಚಿಕೊಂಡಿದ್ದರೆ ಅಖಿಲೇಶ್ ಪಕ್ಷ 5 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿತ್ತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದ ಮಾರುಕಟ್ಟೆಗೆ ಐಬಾಲ್‌ ಟ್ಯಾಬ್ಲೆಟ್