ಕಂಗನಾ ರನೌತ್ ಅಶ್ಲೀಲ ಫೋಟೋ ಪ್ರಕಟಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕಿ

Krishnaveni K
ಮಂಗಳವಾರ, 26 ಮಾರ್ಚ್ 2024 (08:43 IST)
Photo Courtesy: Twitter
ನವದೆಹಲಿ: ಹಿಮಾಚಲ ಪ್ರದೇಶದ ಮಂಡಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಬಾಲಿವುಡ್ ನಟಿ ಕಂಗನಾ ರನೌತ್ ಅಶ್ಲೀಲ ಫೋಟೋ ಪ್ರಕಟಿಸಿ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾಥೆ ವಿವಾದ ಸೃಷ್ಟಿಸಿದ್ದಾರೆ.

ಕಂಗನಾ ಸಿನಿಮಾವೊಂದರ ಗ್ಲಾಮರಸ್ ಫೋಟೋವನ್ನು ಪ್ರಕಟಿಸಿದ ಸುಪ್ರಿಯಾ ‘ಮಂಡಿ ಜನರ ಮನಸ್ಸಲ್ಲಿ ಯಾವ ಭಾವನೆ ಓಡುತ್ತಿದೆ’ ಎಂದು ಪ್ರಶ್ನಿಸಿದ್ದರು. ಈ ಫೋಟೋದಲ್ಲಿ ಕಂಗನಾ ದೇಹ ಸಿರಿ ತೋರುವಂತಹ ಡ್ರೆಸ್ ನಲ್ಲಿದ್ದಾರೆ. ಅವರ ಈ ಫೋಟೋ ಪ್ರಕಟಿಸಿ ಸುಪ್ರಿಯಾ ವಿವಾದಕ್ಕೀಡಾಗಿದ್ದಾರೆ.

ಈ ಫೋಟೋಗೆ ತಿರುಗೇಟು ನೀಡಿರುವ ಕಂಗನಾ ‘ನನ್ನ 20 ವರ್ಷಗಳ ವೃತ್ತಿ ಜೀವನದಲ್ಲಿ ನಾನೊಬ್ಬ ನಟಿಯಾಗಿ ಹಲವು ಪಾತ್ರ ಮಾಡಿದ್ದೇನೆ. ಒಬ್ಬ ವೇಶ್ಯೆಯಾಗಿ, ಒಬ್ಬ ದೇವತೆಯಾಗಿ, ಗ್ಲಾಮರಸ್ ಪಾತ್ರದಲ್ಲಿ ನಟಿಸಿದ್ದೇನೆ. ಆದರೆ ಇದೆಲ್ಲವೂ ಪಾತ್ರಕ್ಕಾಗಿ. ನಾವು ಹೆಣ್ಣು ಮಕ್ಕಳನ್ನು ಈ ಎಲ್ಲಾ ಕಟ್ಟಪಾಡುಗಳಿಂದ ಸ್ವತಂತ್ರವಾಗಿ ಬದುಕಲು ಹೇಳಿಕೊಡಿಬೇಕು. ಪ್ರತಿಯೊಬ್ಬ ಮಹಿಳೆಗೂ ಅವರದ್ದೇ ಆದ ಗೌರವವಿದೆ ಎನ್ನುವುದನ್ನು ಮರೆಯಬೇಡಿ’ ಎಂದು ಕಂಗನಾ ಖಡಕ್ ಆಗಿ ತಿರುಗೇಟು ನೀಡಿದ್ದಾರೆ.

ಎದುರಾಳಿ ಅಭ್ಯರ್ಥಿ ಬಗ್ಗೆ ಟೀಕಿಸುವ ಭರದಲ್ಲಿ ಒಬ್ಬ ಮಹಿಳೆ ಎನ್ನುವುದನ್ನು ಮರೆತು ಇನ್ನೊಬ್ಬ ಮಹಿಳೆ ಬಗ್ಗೆ ಇಷ್ಟು ಕೆಟ್ಟ ಫೋಟೋ ಹಾಕಿ ಟ್ರೋಲ್ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ನೆಟ್ಟಿಗರು ಸುಪ್ರಿಯಾಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಉಡುಪಿ ಕೃಷ್ಣನ ಭೇಟಿಗೆ ಬರಲಿದ್ದಾರೆ ಪ್ರಧಾನಿ ಮೋದಿ

ಅಣ್ಣನೂ ಸಿಎಂ ಆಗಬೇಕು ಎನ್ನೋದೇ ನನ್ನಾಸೆ: ಡಿಕೆ ಸುರೇಶ್

ಸಿಎಂ ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಕೊಟ್ಟ ಹಣದ ಕಂತೆಯೆಷ್ಟು: ಬಿ ಶ್ರೀರಾಮುಲು ಬಾಂಬ್

Karnataka Weather: ಇಂದಿನಿಂದ ಹವಾಮಾನದಲ್ಲಿ ಮಹತ್ವದ ಬದಲಾವಣೆ ಗಮನಿಸಿ

ಶ್ರೀರಾಮುಲು ಕಾಂಗ್ರೆಸ್ ಪಕ್ಷಕ್ಕೆ ಕೊಟ್ಟ ಹಣವನ್ನೇ ಬಿಹಾರ ಚುನಾವಣೆಗೆ ಕಳುಹಿಸಿದ್ದೇವೆ: ಡಿಕೆ ಶಿವಕುಮಾರ್

ಮುಂದಿನ ಸುದ್ದಿ
Show comments