Select Your Language

Notifications

webdunia
webdunia
webdunia
webdunia

ರಾಹುಲ್‌ಗೆ ರಾಜಕೀಯ ಒಗ್ಗದು, ಬೇರೆ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲಿ: 'ಕೈ' ನಾಯಕ

ರಾಹುಲ್‌ಗೆ ರಾಜಕೀಯ ಒಗ್ಗದು, ಬೇರೆ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲಿ: 'ಕೈ' ನಾಯಕ
ಭೂಪಾಲ್ , ಬುಧವಾರ, 12 ಅಕ್ಟೋಬರ್ 2016 (16:40 IST)
ರಾಹುಲ್ ಗಾಂಧಿ ನಾಯಕತ್ವದ ಬಗ್ಗೆ ಆಂತರಿಕವಾಗಿಯೇ ಅಪಸ್ವರಗಳು ಕೇಳಿ ಬರುತ್ತಲೇ ಇರುತ್ತವೆ. ಪ್ರಿಯಾಂಕಾರನ್ನು ಕರೆ ತನ್ನಿ ಎಂಬ ಒತ್ತಾಯಗಳು ಆಗಾಗ ಹರಿದು ಬರುತ್ತಿರುತ್ತವೆ. ಮತ್ತೀಗ ಮಧ್ಯ ಪ್ರದೇಶದ ಕಾಂಗ್ರೆಸ್ ನಾಯಕ ಶೈಲೇಶ್ ಚೌಬೆ ಪಕ್ಷದ ಅಧ್ಯಕ್ಷೆ, ರಾಹುಲ್ ಗಾಂಧಿ ತಾಯಿ, ಸೋನಿಯಾ ಗಾಂಧಿ ಅವರಿಗೆ ರಾಹುಲ್ ಅವರನ್ನು ಪಕ್ಷದ ಉಪಾಧ್ಯಕ್ಷನ ಸ್ಥಾನದಿಂದ ಪದಚ್ಯುತಗೊಳಿಸಿ ಎಂದು ಒತ್ತಾಯಿಸಿದ್ದಾರೆ. ರಾಹುಲ್ ಅವರಿಗೆ ರಾಜಕೀಯ ಒಗ್ಗದು, ಅವರು ಬೇರೆ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲಿ ಎಂದು ಅವರು   ಸೋನಿಯಾರಿಗೆ ವಿಡಿಯೋ ಸಂದೇಶ ಕಳುಹಿಸಿದ್ದಾರೆ. 
 
ಭಾರತೀಯ ಸೈನಿಕರ ಸೀಮಿತ ದಾಳಿಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ನೀಡಿದ್ದ ರಕ್ತದ ದಲ್ಲಾಳಿ ಹೇಳಿಕೆಗೆ ಅಸಮಧಾನ ವ್ಯಕ್ತಪಡಿಸಿರುವ ಚೌಬೆ, ಇದು 'ಸ್ವೀಕಾರಾರ್ಹವಲ್ಲ' ಎಂದು ವಿಡಿಯೋದಲ್ಲಿ ಹೇಳಿದ್ದು, ಈ ವಿಡಿಯೋ ಈಗ ವೈರಲ್ ಆಗಿದೆ. 
 
"ಪಕ್ಷಕ್ಕೆ ಪ್ರಯೋಜನಕಾರಿಯಲ್ಲದವರು ಮತ್ತು ರಾಜಕೀಯ ಕೌಶಲ್ಯಗಳಿಲ್ಲದವರು ಪಕ್ಷದಲ್ಲಿರಲು ಅರ್ಹರಲ್ಲ. ರಾಹುಲ್ ಅವರು ಪದೇ ಪದೇ ಕಾಂಗ್ರೆಸ್‌ಗೆ ಅಪಮಾನವಾಗುವಂತೆ ಮಾಡುತ್ತಿದ್ದಾರೆ. ಅವರನ್ನು ಉಪಾಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸಬೇಕು ಎಂದು ನಾನು ಸೋನಿಯಾ ಅವರಲ್ಲಿ ಮನವಿ ಮಾಡುತ್ತೇನೆ ಎಂದಿರುವ ಚೌಬೆ, ರಾಹುಲ್ ಅವರು ಬೇರೆ ಉದ್ದಿಮೆಯಲ್ಲಿ ತೊಡಗಿಸಿಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ. 
 
ಚೌಬೆ ಅವರ ಈ ಪಕ್ಷ ವಿರೋಧಿ ಹೇಳಿಕೆಗೆ ಪಕ್ಷದೊಳಗಿನಿಂದ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಬದ್ವಾನಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಖಪಾಲ್ ಪರ್ಮಾರ್  ಶೈಲೇಶ್ ಅವರನ್ನು 6 ವರ್ಷದ ಮಟ್ಟಿಗೆ ಪಕ್ಷದಿಂದ ಕೈ ಬಿಡುವಂತೆ ಹಿರಿಯ ನಾಯಕರನ್ನು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

Share this Story:

Follow Webdunia kannada

ಮುಂದಿನ ಸುದ್ದಿ

ಕೇರಳದ ಬಿಜೆಪಿ ಕಾರ್ಯಕರ್ತನ ಹತ್ಯೆ: ನಾಳೆ ಕೇರಳ ಬಂದ್‌ಗೆ ಬಿಜೆಪಿ ಕರೆ