Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿ ಮನೆ ಮುಂದೆ ಹನುಮಂತನ ಬಾಲದಷ್ಟು ಕ್ಯೂ!

ರಾಹುಲ್ ಗಾಂಧಿ
ನವದೆಹಲಿ , ಸೋಮವಾರ, 18 ಡಿಸೆಂಬರ್ 2017 (08:49 IST)
ನವದೆಹಲಿ: ನೂತನವಾಗಿ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೇರಿದ ರಾಹುಲ್ ಗಾಂಧಿ ಮನೆ ಮುಂದೆ ಶುಭಾಷಯ ಕೋರಲು ಕಾಂಗ್ರೆಸ್ ಮುಖಂಡರ ಉದ್ದ ಕ್ಯೂ ನಿಂತಿದೆ.
 

ನಿನ್ನೆಯಿಂದ ರಾಹುಲ್ ಮನೆ ಮುಂದೆ ಕಾಂಗ್ರೆಸ್ ನಾಯಕರ ದಂಡೇ ಹರಿದುಬರುತ್ತಿದೆ. ಬೇರೆ ಬೇರೆ ರಾಜ್ಯಗಳಿಂದ ಬರುತ್ತಿರುವ ನಾಯಕರು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಗೆದ್ದು ರಾಹುಲ್ ಪ್ರಧಾನಿ ಆಗೇ ಆಗ್ತಾರೆ ಎಂದು ವಿಶ್ವಾಸದಲ್ಲಿದ್ದಾರೆ.

ಇದರ ಜತೆಗೆ ಇಂದು ಗುಜರಾತ್ ಚುನಾವಣೆ ಫಲಿತಾಂಶ ಹೊರಬೀಳಲಿರುವ ಹಿನ್ನಲೆಯಲ್ಲಿ ನೂತನ ಅಧ್ಯಕ್ಷರಿಗೆ ಬಲತುಂಬುವ ನಿಟ್ಟಿನಲ್ಲಿ ನಾಯಕರು ರಾಹುಲ್ ಮನೆಯಲ್ಲಿ ಬೀಡುಬಿಟ್ಟಿದ್ದಾರೆ.

ಇದರ ನಡುವೆ ರಾಹುಲ್ ಗಾಂಧಿ ಹಿರಿಯ ನಾಯಕರಿಗೆ ತಮ್ಮ ನಿವಾಸದಲ್ಲಿ ಔತಣಕೂಟ ಏರ್ಪಡಿಸಿದ್ದರು. ಇದರಲ್ಲಿ ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಸೇರಿದಂತೆ ಘಟಾನುಘಟಿ ನಾಯಕರೇ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ, ಕಾಂಗ್ರೆಸ್ ಗೆ ಎದೆಯಲಿ ಢವ ಢವ..!