Select Your Language

Notifications

webdunia
webdunia
webdunia
webdunia

ಅರುಣಾಚಲ ಪ್ರದೇಶ ಬಿಕ್ಕಟ್ಟಿಗೆ ಬಿಜೆಪಿ ಕಾರಣವಲ್ಲ: ರಾಜನಾಥ್ ಸಿಂಗ್

ಕಾಂಗ್ರೆಸ್
ನವದೆಹಲಿ , ಮಂಗಳವಾರ, 19 ಜುಲೈ 2016 (17:27 IST)
ಮುಂಗಾರು ಅಧಿವೇಶನದ ಎರಡನೇ ದಿನವಾದ ಇಂದು ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ವಾಗ್ವಾದಕ್ಕೆ ಕಾರಣವಾಯಿತು. ಅರುಣಾಚಲ ಮತ್ತು ಉತ್ತರಾಖಂಡ್ ರಾಜಕೀಯ ಬಿಕ್ಕಟ್ಟಿಗೆ ಮೋದಿ ಸರಕಾರ ಕಾರಣವಲ್ಲ. ಕಾಂಗ್ರೆಸ್ ಪಕ್ಷ ಮುಳುಗುವ ಹಡಗು ಎಂದು ಗೃಹ ಸಚಿವ ರಾಜನಾಥ್ ಸಿಂಗ್ ತಿರುಗೇಟು ನೀಡಿದ್ದಾರೆ.
 
ಉತ್ತರಾಖಂಡ್ ಮತ್ತು ಅರುಣಾಚಲ ಪ್ರದೇಶದಲ್ಲಿ ಎದುರಾದ ರಾಜಕೀಯ ಬಿಕ್ಕಟ್ಟಿಗೆ ಕಾಂಗ್ರೆಸ್ ಪಕ್ಷದ ಅಂತರಿಕ ಬಿಕ್ಕಟ್ಟು ಕಾರಣ. ಜನಪ್ರಿಯ ಸರಕಾರಗಳನ್ನು ಉರುಳಿಸಿದ ಖ್ಯಾತಿ ಕಾಂಗ್ರೆಸ್ ಪಕ್ಷಕ್ಕಿದೆ. ಒಂದು ವೇಳೆ ನಿಮ್ಮ ಹಡಗಿನಲ್ಲಿ ರಂದ್ರವಿದ್ದರೆ ನೀರನ್ನು ದೂಷಿಸಿ ಅರ್ಥವಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
 
ಗೃಹ ಸಚಿವರ ಹೇಳಿಕೆಯಿಂದ ಆಕ್ರೋಶಗೊಂಡ ಕಾಂಗ್ರೆಸ್ ಸದಸ್ಯರು ಕಲಾಪವನ್ನು ಬಹಿಷ್ಕರಿಸಿ ಹೊರನಡೆದಿದ್ದಾರೆ.
 
ಕಳೆದ ವಾರ, ಸುಪ್ರೀಂಕೋರ್ಟ್ ಅರುಣಾಚಲ ಪ್ರದೇಶದಲ್ಲಿ ಕೇಂದ್ರ ಸರಕಾರ ತೆಗೆದುಕೊಂಡ ನಿಲುವು ಕಾನೂನುಬಾಹಿರ. ಮತ್ತೆ ಕಾಂಗ್ರೆಸ್ ಪಕ್ಷದ ಸರಕಾರ ಅಸ್ತಿತ್ವಕ್ಕೆ ಬರಲಿ ಎಂದು ಆದೇಶ ನೀಡಿ, ರಾಜ್ಯಪಾಲರ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಿತ್ತು.
 
ಕಳೆದ ಡಿಸೆಂಬರ್ 2015 ರಲ್ಲಿ ಬಿಜೆಪಿ ಬೆಂಬಲಿತ ಕಾಂಗ್ರೆಸ್ ಪಕ್ಷದ ಬಂಡಾಯ ಶಾಸಕರು ಮಾಜಿ ಸಿಎಂ ನಬಾಮ್ ಟುಕಿ ವಿರುದ್ಧ ಬಂಡಾಯವೆದ್ದಿದ್ದರು. ರಾಜ್ಯಪಾಲರ ಆದೇಶವನ್ನು ಕಾಂಗ್ರೆಸ್ ಪಕ್ಷ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.  

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಗಣಪತಿ ಆತ್ಮಹತ್ಯೆ: ಪ್ರಸಾದ್, ಮೊಹಾಂತಿ ಮನವಿ ತಳ್ಳಿಹಾಕಿದ ಕೋರ್ಟ್